ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 359 ರನ್ ಗಳ ಟಾರ್ಗೆಟ್ ನೀಡಲಾಗಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡವು 259 ರನ್ ಗಳಿಸಿದೆ. ಭಾರತ ತಂಡವು 156 ರನ್ ಗಳಿಗೆ ಆಲೌಟ್ ಆಗಿತ್ತು. 103 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ 255 ರನ್ ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಭಾರತ ತಂಡವು ದ್ವಿತೀಯ ಇನಿಂಗ್ಸ್ ನಲ್ಲಿ 359 ರನ್ ಗಳ ಬೃಹತ್ ಗುರಿ ಹೊಂದಿದೆ.
ಒಂದು ವೇಳೆ ಭಾರತ ತಂಡ ಈ ಟಾರ್ಗೆಟ್ ದಾಟಿ ಜಯಗಳಿಸಿದರೆ, ಇತಿಹಾಸ ನಿರ್ಮಿಸಲಿದೆ. ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿಯವರೆಗೆ ಟೆಸ್ಟ್ ನಲ್ಲಿ 300ಕ್ಕಿಂತ ಅಧಿಕ ರನ್ ಗಳನ್ನು ಚೇಸ್ ಮಾಡಿ ಒಂದೇ ಬಾರಿ ಗೆದ್ದಿದೆ.
ಭಾರತ ತಂಡ ತವರಿನಲ್ಲಿ ಇಲ್ಲಿಯವರೆಗೆ 26 ಬಾರಿ 300ಕ್ಕೂ ಅಧಿಕ ರನ್ ಗಳ ಟಾರ್ಗೆಟ್ ಪಡೆದಿದೆ. ಆದರೆ, ಗೆದ್ದಿರುವುದು ಒಂದು ಬಾರಿ ಮಾತ್ರ. 2008 ರಲ್ಲಿ ಇಂಗ್ಲೆಂಡ್ ವಿರುದ್ಧ 387 ರನ್ ಗಳನ್ನು ಚೇಸ್ ಮಾಡಿ ಗೆದ್ದಿರುವುದು ಭಾರತದ ಶ್ರೇಷ್ಠ ಸಾಧನೆಯಾಗಿದೆ. 1969 ರಲ್ಲಿ ಕಿವೀಸ್ ವಿರುದ್ಧ 345 ರನ್ ಚೇಸ್ ಮಾಡಿ ಗೆದ್ದಿತ್ತು. ಈಗ ನ್ಯೂಜಿಲೆಂಡ್ ವಿರುದ್ಧ 359 ರನ್ ಟಾರ್ಗೆಟ್ ಪಡೆದು ಇತಿಹಾಸ ನಿರ್ಮಿಸಲಿದೆಯೇ ಕಾಯ್ದು ನೋಡಬೇಕಿದೆ.