ನವದೆಹಲಿ: ಒಂದೇ ಬಟ್ಟೆಗಾಗಿ ಮಹಿಳಾ ಮಣಿಗಳು ಹಾದಿ ಬೀದಿಯಲ್ಲಿ ಬಡಿದಾಡಿಕೊಂಡಿರುವ ವಿಡಿಯೋವೊಂದು ದೆಹಲಿಯ ಸುಪ್ರಸಿದ್ಧ ಕೈಲಾಶ್ ಮಾರ್ಕೆಟ್ ನಲ್ಲಿ ಖರೀದಿ ವೇಳೆ ನಾರಿಮಣಿಯರು ಜಂಗೀಕುಸ್ತಿಗಿಳಿದಿದ್ದಾರೆ. 0ಇಬ್ಬರೂ ಒಂದೇ ಬಟ್ಟೆಯನ್ನು ಆಯ್ಕೆ ಮಾಡಿಕೊಂಡದ್ದೇ ಈ ಕಲಹಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಮಾರುಕಟ್ಟೆ ಅಂಗಡಿ ಮುಂದೆಯೇ ಮಹಿಳೆಯರು ಫೈಟ್ ಮಾಡುತ್ತಿದ್ದರೆ ನೆರೆದಿದ್ದವರು ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.



















