ಬೆಂಗಳೂರು: ನಗರದಲ್ಲಿ ಎಕ್ಸ್ ಟ್ರಾ ಟೀ ಕಪ್ ಕೊಡದಿದ್ದಕ್ಕೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಇಲ್ಲಿಯ ಶೇಷಾದ್ರಿಪುರಂನ ಫಿಲ್ಟರ್ ಕಾಫಿ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಸಂಜೆ 6:50ರ ವೇಳೆಗೆ ಈ ಘಟನೆ ನಡೆದಿದೆ. ನಾಲ್ವರು ವ್ಯಕ್ತಿಗಳು ಓರ್ವ ಹೋಟೆಲ್ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಕಪಾಳಮೋಕ್ಷ ಮಾಡಿ, ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದು ವಿಕೃತಿ ಮರೆದಿದ್ದಾರೆ. ಶೇಷಾದ್ರಿಪುರಂನ ಫಿಲ್ಟರ್ ಕಾಫಿ ಶಾಪ್ ಗೆ ನಾಲ್ವರು ದುಷ್ಕರ್ಮಿಗಳು ಬಂದಿದ್ದರು. ಆ ವೇಳೆ ಕಾಫಿ ಖರೀದಿಸಿ ಎಕ್ಸ್ ಟ್ರಾ ಕಪ್ ಕೇಳಿದ್ದಾರೆ. ಆಗ ಸಿಬ್ಬಂದಿ ಎಕ್ಸ್’ಟ್ರಾ ಕಪ್ ಇಲ್ಲಾ ಸರ್. ಮತ್ತೊಂದು ಕಾಫಿನೇ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.