ಬೆಂಗಳೂರು: ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಎಸ್‌ಯುವಿ ಕಾರುಗಳು ಹೆಚ್ಚು ಪ್ರಭಾವ ಬೀರುತ್ತಿದೆ. ಹೀಗಾಗಿ ಸೆಡಾನ್‌ಗಳಿಗೆ ಸ್ವಲ್ಪ ಪ್ರಮಾಣ ಹಿನ್ನಡೆ ಉಂಟಾಗಿದೆ. ಆದಾಗ್ಯೂ, ಸೆಡಾನ್ ಕಾರುಗಳಿಗೆ ಒಂದಿಷ್ಟು ಮಂದಿ ಅಭಿಮಾನಿಗಳಿದ್ದಾರೆ. ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 ಇದನ್ನು ಸಾಬೀತುಪಡಿಸಿದೆ. ಅಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದಾದ ಹಲವು ಸೆಡಾನ್ ಮಾದರಿಗಳನ್ನು ಪರಿಚಯಿಸಲಾಗಿದೆ. ಹಾಗಾದರೆ 2025ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇರುವ 6 ಸೆಡಾನ್ ಕಾರುಗಳು ಯಾವುದು ಎಂಬುದನ್ನು ನೋಡೋಣ.
ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್
ಸ್ಕೋಡಾ ಇಂಡಿಯಾ ಈ ವರ್ಷ ಹಬ್ಬದ ಅವಧಿಯಲ್ಲಿ, ಫೇಸ್‌ಲಿಫ್ಟ್ ಮಾಡಲಾದ ಸ್ಲಾವಿಯಾ (Slavia) ಸೆಡಾನ್ ಬಿಡುಗಡೆ ಮಾಡಬಹುದು. ಇದು ಮಿಡ್ ಲೈಫ್ ಅಪ್‌ಡೇಟ್ ಆಗಿದ್ದು ಸೆಡಾನ್ ಖರೀದಿಸುವ ಭಾರತೀಯ ಗ್ರಾಹಕರಿಗೆ ಹೊಸ ಆಯ್ಕೆ ಲಭ್ಯವಾಗಲಿದೆ. ಈ ಫೇಸ್‌ಲಿಫ್ಟ್ ಕಾರು ನೂತನ ವಿನ್ಯಾಸದೊಂದಿಗೆ ಬರುವ ನಿರೀಕ್ಷೆಯಿದೆ. ಶಾರ್ಪರ್ ಹೆಡ್‌ಲ್ಯಾಂಪ್‌ಗಳು, ಹೊಸ ಗ್ರಿಲ್, ಮರು ವಿನ್ಯಾಸಗೊಂಡ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು ಇದರ ಭಾಗವಾಗಬಹುದು. ಕೆಲವು ವರದಿಗಳ ಪ್ರಕಾರ, ಕಾರಿನಲ್ಲಿ ವೈಡ್ ಆಂಗಲ್ ಡಿಆರ್‌ಎಲ್ ಇರಲಿದೆ.
ಸ್ಲಾವಿಯಾ ಒಳಭಾಗದಲ್ಲಿಯೂ ಹೆಚ್ಚಿನ ತಂತ್ರಜ್ಞಾನ ಮತ್ತು ಫೀಚರ್‌ಗಳು ಇರಲಿದೆ. ಇದರ ಹೆಚ್ಚಿನ ವಿವರಗಳು ಇನ್ನೂ ಲಭ್ಯವಿಲ್ಲ. ADAS (Advanced Driver Assistance Systems) ಕೂಡ ಅದರ ಭಾಗವಾಗಬಹುದು. ಕಾರಿನ ಪವರ್‌ಟ್ರೈನ್ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯಲಿದೆ. ಅದು 1.0 TSI ಮತ್ತು 1.5 TSI ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಲಭ್ಯವಾಗಲಿದೆ. ಮ್ಯಾನುಯಲ್, AT ಮತ್ತು DSG ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿವೆ.

ಫೋಕ್ಸ್ ವ್ಯಾಗನ್ ವೆರ್ಟಸ್ ಫೇಸ್‌ಲಿಫ್ಟ್
ಫೋಲ್ಕ್ಸ್‌ವ್ಯಾಗನ್‌ನ ವೆರ್ಟಸ್ ಸ್ಕೋಡಾ ಸ್ಲಾವಿಯಾ ಮಾದರಿಯ ಸೆಡಾನ್. ಈ ಕಂಪನಿಯೂ 2025ರಲ್ಲಿ ಫೇಸ್‌ಲಿಫ್ಟ್ ನೀಡುವ ಸಾಧ್ಯತೆ ಇದೆ. 2025ರ ಮಧ್ಯಭಾಗದಲ್ಲಿ ವೆರ್ಟಸ್ ಫೇಸ್‌ಲಿಫ್ಟ್ ಬಿಡುಗಡೆಯಾಗಬಹುದು. ಸ್ಲಾವಿಯಾ ಫೇಸ್‌ಲಿಫ್ಟ್‌ನಂತೆ ಈ ಕಾರಿಗೂ ವಿನ್ಯಾಸ ಬದಲಾವಣೆಗಳು ಮತ್ತು ಹೊಸ ಫೀಚರ್‌ಗಳು ಸಿಗಬಹುದು.
ಸ್ಕೋಡಾ ಆಕ್ಟೇವಿಯಾ ಆರ್‌ಎಸ್
ಸ್ಕೋಡಾ ತನ್ನ ಆಕ್ಟೇವಿಯಾ RS ಫರ್ಮಾಮೆನ್ಸ್ ಸೆಡಾನ್ ಅನ್ನು 2025ರಲ್ಲಿ ಭಾರತದಲ್ಲಿ ಪರಿಚಯಿಸಲಿದೆ. ಇದನ್ನು CBU (Complete Built Unit) ಆಗಿ ಆಮದು ಮಾಡಲಾಗುತ್ತದೆ. ಸ್ಕೋಡಾ ಈ ಕಾರನ್ನು ಭಾರತ ಮೊಬಿಲಿಟಿ ಗ್ಲೋಬಲ್ ಆಟೋ ಎಕ್ಸ್‌ಪೋ 2025ರಲ್ಲಿ ಪ್ರದರ್ಶಿಸಲಾಗಿದೆ. ಆಕ್ಟೇವಿಯಾ RS 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 264 bhp ಮತ್ತು 370 Nm ಪವರ್ ಉತ್ಪಾದಿಸುತ್ತದೆ. ಇದು 7-ಸ್ಪೀಡ್ DSG ಗೇರ್‌ಬಾಕ್ಸ್ ಅನ್ನು ಹೊಂದಿರಲಿದೆ.
ಸ್ಕೋಡಾ ಸುಪರ್ಬ್ ಡೀಸೆಲ್
ಸ್ಕೋಡಾ ಸುಪರ್ಬ್ ಸೆಡಾನ್ ಅನ್ನು ಭಾರತದಲ್ಲಿ ಮತ್ತೆ ಪರಿಚಯಿಸಲು ತಯಾರಿ ನಡೆಸಲಾಗುತ್ತಿದೆ. ಸುಪರ್ಬ್ ಭಾರತದಲ್ಲಿ ಬಹಳ ಜನಪ್ರಿಯ ಕಾರಾಗಿತ್ತು. ಇದರ ಹೊಸ ಆವೃತ್ತಿ CBU ರೂಪದಲ್ಲಿ ಆಮದು ಆಗಲಿದೆ. ಹೊಸ ಸುಪರ್ಬ್ ಮೂಲಕ ಸ್ಕೋಡಾ ಡೀಸೆಲ್ ಎಂಜಿನ್ ಅನ್ನು ಮತ್ತೆ ಪರಿಚಯಿಸಲಿದೆ. ಸುಮಾರು ₹55 ಲಕ್ಷ (ಎಕ್ಸ್-ಶೋರೂಮ್) ಬೆಲೆಗೆ ಇದು ಲಭ್ಯವಾಗುವ ನಿರೀಕ್ಷೆಯಿದೆ. ಹೊಸ ಸುಪರ್ಬ್ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದ್ದು, 188bhp ಮತ್ತು 320 Nm ಶಕ್ ಉತ್ಪಾದಿಸಲಿದೆ. ಈ ಎಂಜಿನ್ ನಂತರ ಕೊಡಿಯಾಕ್ ಎಸ್‌ಯವಿಗೂ ಲಭ್ಯವಾಗಲಿದೆ.

ಸ್ಕೋಡಾ ಆಕ್ಟೇವಿಯಾ 1.5
ಸ್ಕೋಡಾ ಸ್ಲಾವಿಯಾನಲ್ಲಿ 1.5 TSI ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಆಕ್ಟೇವಿಯಾ ಮಾದರಿ ರಸ್ತೆಗೆ ಇಳಿಯಲಿದೆ. ಈ ಎಂಜಿನ್ 150 hp ಮತ್ತು 250 Nm ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಎಂಜಿನ್ Active Cylinder Deactivation Technology* ಅನ್ನು ಹೊಂದಿದೆ. ಗ್ಲೋಬಲ್ ಮಾದರಿಯಲ್ಲಿ, 1.5-ಲೀಟರ್ EA211 EVO2 ಎಂಜಿನ್ ಲಭ್ಯವಿದೆ. ಅದು 150 bhp ಶಕ್ತಿಯನ್ನು ಉತ್ಪಾದಿಸುತ್ತದೆ.
ಟಾಟಾ ಟಿಗೋರ್ ಫೇಸ್‌ಲಿಫ್ಟ್
ಟಾಟಾ ಟಿಗೋರ್, ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್ ಆಧಾರಿತ ಒಂದು ಜನಪ್ರಿಯ ಸೆಡಾನ್. ಇದು ಬಹಳ ವರ್ಷಗಳಿಂದ ಮಾರಾಟದಲ್ಲಿದೆ. ಟಾಟಾ ಮೋಟಾರ್ಸ್ ಟಿಗೋರ್ ಫೇಸ್‌ಲಿಫ್ಟ್ ಅನ್ನು 2025ರಲ್ಲಿ ಬಿಡುಗಡೆ ಮಾಡಬಹುದು. ಹೊಸ ಮಾದರಿಯು ಮುಖ್ಯವಾಗಿ ಕಾಸ್ಮೆಟಿಕ್ ಬದಲಾವಣೆಗಳನ್ನು ಒಳಗೊಂಡಿರಲಿದೆ. ಮರು ವಿನ್ಯಾಸಗೊಂಡ ಮುಂಭಾಗ ಮತ್ತು ಹಿಂಭಾಗ ಇರಲಿದೆ. ಹೊಸ ಹೆಡ್ಲ್ಯಾಂಪ್ಸ್, ಟೈಲ್ ಲ್ಯಾಂಪ್ಸ್ ಮತ್ತು ಬಂಪರ್‌ಗಳೊಂದಿಗೆ ಬರುತ್ತದೆ. ಒಳಭಾಗದಲ್ಲಿ ಹೊಸ ಫೀಚರ್‌ಗಳು ಮತ್ತು ಉತ್ತಮ ಗುಣಮಟ್ಟದ ಸೀಟ್‌ಗಳು ಸೇರಬಹುದು. ಪವರ್‌ಟ್ರೈನ್ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯಲಿದೆ.