ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿರುವ ಪರಿಣಾಮ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ವ್ಯವಸ್ಥೆಯನ್ನು ಐಟಿ ಕಂಪನಿಗಳು ಕಲ್ಪಿಸಿವೆ.
ಬೆಂಗಳೂರಿನ ಮಾರತ್ ಹಳ್ಳಿ, ವೈಟ್ ಫೀಲ್ಡ್, ಐಟಿಪಿಎಲ್ ಹಾಗೂ ಐಟಿಪಿಬಿ ಭಾಗಗಳಲ್ಲಿನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಐಟಿ ಕಂಪನಿಗಳು ಕಲ್ಪಿಸಿವೆ.
ಅಲ್ಲದೇ, ಹವಾಮಾನ ಇಲಾಖೆ ಈ ವಾರ ಪೂರ್ತಿ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಾರ ಪೂರ್ತಿ ವರ್ಕ್ ಫ್ರಂ ಹೋಂಗೆ ಅವಕಾಶ ಕಲ್ಪಿಸಲಾಗಿದೆ. ಅವಶ್ಯಕತೆ ಇರುವಷ್ಟು ಮಂದಿ ಮಾತ್ರ ಕಚೇರಿಯತ್ತ ಬರಬೇಕು. ಮನೆಯಿಂದ ಉಳಿದ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ ಎನ್ನಲಾಗಿದೆ.



















