ಕಲಬುರುಗಿ : ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಭಾರಿ ಮಳೆ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಭೂತ್ಪುರ ಗ್ರಾಮದ ಸೇತುವೆಗಳು ಜಲಾವೃತಗೊಂಡು ಚಿಂಚೋಳಿ, ಕಾಳಗಿ, ಸೇಡಂ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮತ್ತೊಂದೆಡೆ ರುದ್ನೂರು ಗ್ರಾಮದ ಸುತ್ತಮುತ್ತ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ರುದ್ನೂರಿನ ಐತಿಹಾಸಿಕ ಶ್ರೀ ತೋಂಟದಾರ್ಯ ಸಿದ್ದೇಶ್ವರ ಮಠ ಸಂಪೂರ್ಣ ಜಲಾವೃತವಾಗಿದೆ.



















