ಬೆಂಗಳೂರು: ಸಿಲಿಕಾನ್ ಸಿಟಿಗೆ ಮುಂದಿನ 48 ಗಂಟೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳವಾರ ಕೂಡ ರಾಜ್ಯದ ಬಹುತೇಕ ಕಡೆ ಮಳೆಯಾಗಿದೆ. ರಾಜರಾಜೇಶ್ವರಿ ನಗರ ಒಂದರಲ್ಲೇ ಬರೋಬ್ಬರಿ 135 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬುಧವಾರ ನಗರದ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು, ಮತ್ತೆ ಮಳೆಯಾಗುವ ಸಾಧ್ಯತೆ ಇದೆ.
ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆ?
-ಕೆಂಗೇರಿ 134.5 ಮಿ.ಮೀ
-ನಾಯಂಡಹಳ್ಳಿ 115 ಮಿ.ಮೀ
-ವಿದ್ಯಾಪೀಠ 110 ಮಿ.ಮೀ
-ಆರ್ಆರ್ ನಗರ, ಕೆಂಗೇರಿ 80.5ಮಿ.ಮೀ
-ಹಂಪಿನಗರ 80.5 ಮಿ.ಮೀ
-ರಾಜರಾಜೇಶ್ವರಿ ನಗರ 02 77 ಮಿ.ಮೀ
-ಎಚ್ ಗೊಲ್ಲಹಳ್ಳಿ 70.5 ಮಿ.ಮೀ
-ದೊರೆಸಾನಿಪಾಳ್ಯ 70.5 ಮಿ.ಮೀ
-ಬಿಳೆಕಹಳ್ಳಿ 70 ಮಿ.ಮೀ
-ಹೆಮ್ಮಿಗೆಪುರ 62.5 ಮಿ.ಮೀ
-ಹೆರೋಹಳ್ಳಿ 61 ಮಿ.ಮೀ
-ಅರಕೆರೆ 46.5 ಮಿ.ಮೀ
-ಬಸವೇಶ್ವರ ನಗರ 43ಮಿ.ಮೀ
-ಕೋರಮಂಗಲ 33 ಮಿ.ಮೀ