ನೆಲಮಂಗಲ: ದಪ್ಪಗಿರುವುದಕ್ಕೆ ಮದುವೆಗೆ ಹುಡುಗಿ ಸಿಗುತ್ತಿಲ್ಲವೆಂದು ಯುವಕ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ನಾರಾಯಣಪ್ಪನಪಾಳ್ಯದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ಆಟೋ ಚಾಲಕ ವೆಂಕಟೇಶ್(29) ಆತ್ಮಹತ್ಯೆ (death)ಗೆ ಶರಣಾಗಿರುವ ವ್ಯಕ್ತಿ. ಗೋವಿಂದರಾಜು ಮತ್ತು ಮಂಗಳಮ್ಮ ದಂಪತಿ ಪುತ್ರ ವೆಂಕಟೇಶ್ ಮದುವೆಯಾಗುವುದಕ್ಕೆ ಹುಡುಗಿ ಹುಡುಕುತ್ತಿದ್ದರು. ಆದರೆ, ಹುಡುಗಿಯ ಮನೆಯವರು ಹುಡುಗ ದಪ್ಪಗಿದ್ದಾನೆಂದು ನಿರಾಕರಿಸಿದ್ದರು. ಹೀಗಾಗಿ ಮನನೊಂದು ವೆಂಕಟೇಶ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ನ್ನಲಾಗಿದೆ.
ಗೋವಿಂದರಾಜು ಹಾಗೂ ಮಂಗಳಮ್ಮ ದಂಪತಿಗೆ ಇಬ್ಬರು ಪುತ್ರರು. ಆದರೆ, ಇಬ್ಬರಿಗೂ ಮದುವೆಯಾಗಿರಲಿಲ್ಲ. ಎಷ್ಟೇ ಕರೆ ಮಾಡಿದರೂ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಚಿಕ್ಕಮ್ಮ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.