ಬೆಂಗಳೂರು: ದೇಶದಲ್ಲೇ ಖಾಸಗಿ ವಲಯದ ಬೃಹತ್ ಬ್ಯಾಂಕ್ ಎನಿಸಿರುವ ಎಚ್ ಡಿ ಎಫ್ ಸಿ ಈಗ ಸಾಲಗಾರರಿಗೆ ಸಿಹಿ ಸುದ್ದಿ ನೀಡಿದೆ. ಎಂಸಿಎಲ್ಆರ್ ಆಧಾರಿತವಾಗಿ ನೀಡುವ ಸಾಲದ ಮೇಲಿನ ಬಡ್ಡಿಯಲ್ಲಿ 10 ಬೇಸಿಸ್ ಪಾಯಿಂಟ್ ಗಳನ್ನು ಎಚ್ ಡಿ ಎಫ್ ಸಿ ಕಡಿಮೆ ಮಾಡಿದೆ. ಇದರಿಂದಾಗಿ, ಗೃಹ ಸಾಲ ಸೇರಿ ಯಾವುದೇ ರೀತಿಯ ಸಾಲ ತೆಗೆದುಕೊಂಡವರಿಗೆ ಇಎಂಐ ಹೊರೆಯಲ್ಲಿ ಇಳಿಕೆಯಾಗಲಿದೆ. ಪರಿಷ್ಕೃತ ಬಡ್ಡಿದರಗಳು 2025ರ ನವೆಂಬರ್ 7 ರಿಂದಲೇ ಜಾರಿಗೆ ಬಂದಿವೆ.
ಪರಿಷ್ಕೃತ ದರಗಳ ನಂತರ, ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಎಂಸಿಎಲ್ಆರ್ ದರಗಳು ಕನಿಷ್ಠ 8.35% ರಿಂದ ಗರಿಷ್ಠ 8.60% ರಷ್ಟಿವೆ. ಇದಕ್ಕೂ ಮೊದಲು, ಇದು 8.45% ರಿಂದ 8.65%ರಷ್ಟು ಇದ್ದವು. ಎಂಸಿಎಲ್ಆರ್ ಕಡಿಮೆಯಾದರೆ, ಹೊಸದಾಗಿ ಸಾಲ ತೆಗೆದುಕೊಳ್ಳುವವರಿಗೆ ಬಡ್ಡಿ ಹೊರೆ ಕಡಿಮೆಯಾಗುತ್ತದೆ. ಫ್ಲೋಟಿಂಗ್ ದರದಲ್ಲಿ ಸಾಲ ಪಡೆದವರಿಗೆಗೂ ಇಎಂಐ ಕಡಿಮೆಯಾಗುತ್ತದೆ.
ಸಾಲಗಾರರಿಗೆ ಬ್ಯಾಂಕ್ ನೀಡುವ ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿದರವನ್ನು ಎಂಸಿಎಲ್ಆರ್ ತಿಳಿಸುತ್ತದೆ. ಇದನ್ನು ಸಾಲ ಆಧಾರಿತ ಬಡ್ಡಿದರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಹಾಗೆಯೇ, ಇದನ್ನು ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿದರ ಎಂದು ಕರೆಯಬಹುದು. ಎಲ್ಲ ಬ್ಯಾಂಕ್ ಗಳಿಗೆ ಏಕರೂಪವಾಗಿ 2016ರಲ್ಲಿ ಆರ್ ಬಿಐ ಜಾರಿಗೆ ತಂದಿದೆ.
ಕಳೆದ ಒಂದು ವರ್ಷದ ಎಂಸಿಎಲ್ಆರ್ ದರವು ಶೇ.8.55 ರಿಂದ ಶೇ.8.50 ಕ್ಕೆ ಇಳಿದಿದೆ. ಸಾಮಾನ್ಯವಾಗಿ ಗ್ರಾಹಕ ಸಾಲಗಳು ಈ ಅವಧಿಗೆ ಲಿಂಕ್ ಆಗಿರುತ್ತವೆ ಎಂದು. ಎರಡು ಮತ್ತು ಮೂರು ವರ್ಷಗಳ ಎಂಸಿಎಲ್ಆರ್ ದರಗಳು ಕ್ರಮವಾಗಿ ಶೇ.8.55% ಮತ್ತು ಶೇ.8.60% ರಷ್ಟಿದ್ದು, ಇಲ್ಲಿ 5 ಬೇಸಿಸ್ ಪಾಯಿಂಟ್ ಗಳ ಕಡಿತ ಮಾಡಲಾಗಿದೆ.
ಇದನ್ನೂ ಓದಿ : ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆ : ನೇರ ಸಂದರ್ಶನ ಮೂಲಕ ನೇಮಕ



















