ಪಾಕಿಸ್ತಾನ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ಯುವ ಆಟಗಾರ ಹ್ಯಾರಿ ಬ್ರೂಕ್ (Harry Brook) ಸ್ಪೋಟಕ ತ್ರಿಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೂಕ್ 310 ಎಸೆತಗಳಲ್ಲಿ ತ್ರಿ ಶತಕ ಗಳಿಸಿದ್ದಾರೆ. ಈ ಮೂಲಕ ಅತೀ ವೇಗದ ಶತಕ ಸಿಡಿಸಿದ ಇಂಗ್ಲೆಂಡ್ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 5 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತ್ರಿಶತಕವೊಂದು ಮೂಡಿ ಬಂದಿದೆ. 2019 ರಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (335) ಪಾಕಿಸ್ತಾನದ ವಿರುದ್ಧವೇ ತ್ರಿಶತಕ ಸಿಡಿಸಿದ್ದು ಕೊನೆಯಾಗಿತ್ತು. ಈಗ ಮತ್ತೋರ್ವ ಆಟಗಾರ 300ರ ಗಡಿ ದಾಟಿದ್ದಾರೆ. ಅಂತಿಮವಾಗಿ ಹ್ಯಾರಿ ಬ್ರೂಕ್ 322 ಎಸೆತಗಳನ್ನು ಎದುರಿಸಿ 317 ರನ್ ಗಳಿಸಿ ಔಟ್ ಆಗಿದ್ದಾರೆ.
ಅಲ್ಲದೇ, ಇಂಗ್ಲೆಂಡ್ ನಲ್ಲಿ 34 ವರ್ಷಗಳ ನಂತರ ಆಟಗಾರರೊಬ್ಬರು ತ್ರಿಶತಕ ಸಿಡಿಸಿದ ಸಾಧನೆ ಮೂಡಿ ಬಂದಿದೆ. 1990 ರಲ್ಲಿ ಗ್ರಾಹಂ ಗೂಚ್ (333 ರನ್ಗಳು) ಇಂಗ್ಲೆಂಡ್ ಪರ ತ್ರಿಶತಕ ಸಿಡಿಸಿದ್ದರು.