ಉತ್ತರ ಕನ್ನಡ: ಕೈದಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ ಬೇಡಿಕೆ ಇಟ್ಟಿದ್ದ ಜೈಲ್ ಅಧಿಕಾರಿಯೂಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
ಹಳಿಯಾಳ ಸಬ್ ಜೈಲಿನ ಕಲ್ಲಪ್ಪ ಗಸ್ತಿ ಲೋಕಾ ಬಲೆಗೆ ಬಿದ್ದ ಜೈಲರ್. ಜೈಲಿನಲ್ಲಿ ಕೆಲಸ ಮಾಡಿದ್ದ ರಾಜ್ ಕುಮಾರ್‌ಗೆ ಸರ್ಕಾರದಿಂದ 1.75 ಲಕ್ಷ ಬಿಡುಗಡೆಯಾಗಿತ್ತು. ಆದರೆ ಸರ್ಕಾರ ಕೈದಿಗೆ ಮಂಜೂರಿ ಮಾಡಿದ್ದ ಹಣ ನೀಡಲು ಜೈಲರ್ ಕಲ್ಲಪ್ಪ ಗಸ್ತಿ, 60 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆ ಜೈಲರ್ ಮುಂಗಡವಾಗಿ 10 ಸಾವಿರ ಫೋನ್ ಪೇ ಮೂಲಕ ಹಣ ಪಡೆದಿದ್ದರು. ಈ ವೇಳೆ ಕಾರವಾರ ಲೋಕಾಯುಕ್ತ ಡಿ.ಎಸ್ಪಿ ಧನ್ಯಾ ನಾಯಕ್ ಹಾಗೂ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಸದ್ಯ ಕಲ್ಲಪ್ಪ ಗಸ್ತಿಯನ್ನ ವಶಕ್ಕೆ ಪಡೆದ ಲೋಕಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪೊಲೀಸರಿಂದ ಕಿರುಕುಳ ಆರೋಪ – ಆತ್ಮಹತ್ಯೆಗೆ ಯತ್ನಿಸಿದ ಯೂಟ್ಯೂಬರ್



















