ಗಡಿಯಲ್ಲಿ ಶತೃಗಳ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಹುತಾತ್ಮರಾಗಿದ್ದಾರೆ.
ದೀಪಕ್ ಚಿಮಂಗ್‌ಖಾಮ್ (Deepak Chimngakham) ಹುತಾತ್ಮರಾದ ಯೋಧ ಎನ್ನಲಾಗಿದೆ. ಆರ್‌ಎಸ್ ಪುರದಲ್ಲಿ (RS Pura) ಪಾಕಿಸ್ತಾನ (Pakistan) ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ (BSF Soldier) ಹುತಾತ್ಮರಾಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಸಂಘರ್ಷದಲ್ಲಿ ದೀಪಕ್ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ದೀಪಕ್ ಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಯೋಧರು ಸಂತಾಪ ಸೂಚಿಸಿದ್ದಾರೆ.