ಶ್ರೀನಗರ: ಪಹಲ್ಗಾಮ್ ಘಟನೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ್ ಮಧ್ಯೆ ಪರಿಸ್ಥಿತಿ ಹದಗೆಟ್ಟಿದೆ. ಪಹಲ್ಗಾಮ್ ಘಟನೆಯಿಂದ ಹಿಂದೆ ಪಾಕ್ ಕೈವಾಡ ಇದೆ ಎಂಬ ಕಾರಣಕ್ಕೆ ಭಾರತ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಮಧ್ಯೆ ಪಾಕ್ ಮತ್ತೆ ಉದ್ಧಟತನ ಮೆರೆದಿದೆ.
ಗಡಿ ನಿಯಂತ್ರಣ ರೇಖೆಯ (LoC) ಕೆಲವು ಸ್ಥಳಗಳಲ್ಲಿ ಪಾಕಿಸ್ತಾನ ತನ್ನ ನೆಲೆಯಿಂದ (Pakistan) ಭಾರತದ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕ್ ಸೇನೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದು, ಪ್ರತಿಯಾಗಿ ಭಾರತವೂ ಗುಂಡು ಹಾರಿಸಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗಿದೆ.