ಗುಜರಾತ್ : ಸಮೀಪ್ ಕಾಂಪ್ಲೆಕ್ಸ್ನಲ್ಲಿ ಸಂಭವಿಸಿದ ಬೆಂಕಿಯಿಂದ ಆಸ್ಪತ್ರೆಗೆ ಬೆಂಕಿ ಹರಡಿ ನವಜಾತ ಶಿಶುಗಳು ಸೇರಿದಂತೆ 15ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿರುವ ಘಟನೆ ಭಾವನಗರ ಕಲಾ ನಾಲಾ ಪ್ರದೇಶದಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಂಡ ಕಟ್ಟಡಲ್ಲಿ ಮೂರರಿಂದ ನಾಲ್ಕು ಆಸ್ಪತ್ರೆಗಳಿದ್ದವು.
ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ 5ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದವು. 50 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕಾರ್ಯನಿರತರಾಗಿದ್ದರು. ಈ ಕಟ್ಟಡದಲ್ಲಿ 3-4 ಆಸ್ಪತ್ರೆಗಳಿರುವುದರಿಂದ, ರೋಗಿಗಳ ಜೀವಕ್ಕೆ ಅಪಾಯವಿತ್ತು.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಸಮೀಪ್ ಕಾಂಪ್ಲೆಕ್ಸ್ನಲ್ಲಿರುವ ನೈಸ್ ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ ಐದು ಮಕ್ಕಳನ್ನು ಅಗ್ನಿಶಾಮಕ ದಳದವರು ಏಣಿಗಳ ಮೂಲಕ ಕಿಟಕಿಯಿಂದ ರಕ್ಷಿಸಿದರು.
ಇದನ್ನೂ ಓದಿ : 3 ಕೋಟಿ ಬೆಲೆಯ ಜಮೀನನ್ನು ರುದ್ರಭೂಮಿಗೆ ದಾನ ಕೊಟ್ಟ ಭೂ ಒಡೆಯ



















