ಮೈಸೂರು: ತಾತ (Grandfather) ಹಾಗೂ ಇಬ್ಬರು ಮೊಮ್ಮಕ್ಕಳು (Grandchildren) ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ (Mysuru) ಟಿ.ನರಸಿಪುರ (T Narasipura) ತಾಲೂಕಿನ ಈ ಘಟನೆ ನಡೆದಿದೆ. ಚೌಡಯ್ಯ (70), ಭರತ್ (13), ಧನುಷ್ (10) ಮೃತ ಸಾವನ್ನಪ್ಪಿದವರು. ಮೃತರು ಟಿ.ನರಸೀಪುರ ಪಟ್ಟಣದ ತಿರುಮಕೂಡಲಿನ ನಿವಾಸಿಗಳಾಗಿದ್ದು, ಕಾವೇರಿ ನದಿಗೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದನ್ನು ಕಂಡ ತಾತ ರಕ್ಷಿಸಲು ಮುಂದಾಗಿದ್ದಾನೆ. ಆದರೆ, ಮೊಮ್ಮಕ್ಕಳನ್ನು ರಕ್ಷಿಸಲು ಆಗದೆ, ನೀರಲ್ಲಿ ಮುಳುಗಿದ್ದಾನೆ. ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.