ಬೆಂಗಳೂರು | ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 750 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2025-26ನೇ ಸಾಲಿನ ವಿಶೇಷ ಮೂಲ ಸೌಕರ್ಯಕ್ಕಾಗಿ ಜಿಬಿಎಗೆ ಹಣ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಮೂಲ ಸೌಕರ್ಯಕ್ಕಾಗಿ ಜಿಬಿಎಗೆ 3 ಸಾವಿರ ಕೋಟಿ ಅನುದಾನ ನಿಗದಿ ಮಾಡಿತ್ತು. ಇದೀಗ ನಾಲ್ಕನೇ ಕಂತಿನಲ್ಲಿ ವಿಶೇಷ ಮೂಲ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯಡಿ 2025-26ನೇ ಸಾಲಿನ ಹಣ ರಿಲೀಸ್ ಮಾಡಲಾಗಿದೆ.
ನಾಲ್ಕನೇ ಕಂತಿನಲ್ಲಿ 750 ಕೋಟಿ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದ್ದು, ಸರ್ಕಾರ ಅನುಮೋದನೆ ನೀಡಿರುವ ಕ್ರಿಯಾ ಯೋಜನೆ ಕಾಮಗಾರಿಗಳಿಗೆ ಮಾತ್ರ ಹಣ ಬಳಕೆಗೆ ಸೂಚನೆ ನೀಡಲಾಗಿದೆ. ಹೊಸ ಕಾಮಗಾರಿಗಳಿಗೆ ಈ ಅನುದಾನ ಬಳಸದಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಹೋಂಡಾ ಕಾರು ಪ್ರಿಯರಿಗೆ ಬಂಪರ್ ಆಫರ್ | 2 ಲಕ್ಷ ರೂ.ವರೆಗೆ ಭರ್ಜರಿ ರಿಯಾಯಿತಿ!



















