ಬೆಂಗಳೂರು : ಬ್ರ್ಯಾಂಡ್ ಬೆಂಗಳೂರನ್ನು ರಾಜ್ಯ ಕೇಸರಿ ಪಡೆ ಕಾಲೆಳೆದಿದೆ. ಬೆಂಗಳೂರು ರಸ್ತೆಗಳು ಕೆರೆಗಳಾಗಿದ್ದು, ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಮೀನು ಹಿಡಿಯುತ್ತಿರುವ ಸಿಎಂ, ಡಿಸಿಎಂ ಪೋಸ್ಟ್ ಅನ್ನು ಅಧಿಕೃತ ಎಕ್ಸ್ ಖಾತೆಯಲ್ಲಿ ಹಾಕಿ ವ್ಯಂಗ್ಯವಾಡಿದೆ.

ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಈಗ ಕೆರೆಯಾಗಿ ಮಾರ್ಪಟ್ಟಿವೆ ಎಂದು ಟೀಕೆ ಮಾಡಿದ್ದಾರೆ.