ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಲಾರಿ ಮಾಲೀಕರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಎಚ್ಚೆತ್ತುಕೊಂಡಿರುವ ಸರ್ಕಾರ ಸಂಧಾನಕ್ಕೆ ಆಹ್ವಾನ ನೀಡಿದೆ.
ಮುಷ್ಕರದಿಂದ ಎಚ್ಚೆತ್ತುಕೊಂಡಿರು ಸರ್ಕಾರ ಇಂದು ಮಧ್ಯಾಹ್ನ 3ಕ್ಕೆ ವಿಧಾನಸೌಧದಲ್ಲಿ ಸಭೆ ಕರೆದಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಗೆ ಲಾರಿ ಮಾಲೀಕರು ಸೇರಿದಂತೆ ಗೂಡ್ಸ್ ವಾಹನಗಳ ಮಾಲೀಕರು ಭಾಗಿಯಾಗಲಿದ್ದಾರೆ.
ಬೇಡಿಕೆ ಈಡೇರಿಸುವಂತೆ ಲಾರಿ ಮಾಲೀಕರು ಬಿಗಿ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಒಂದು ವೇಳೆ ಸಭೆ ವಿಫಲವಾದರೆ ಮತ್ತೆ ಮುಷ್ಕರ ಉಗ್ರ ರೂಪದಲ್ಲಿ ನಡೆಸಲು ಲಾರಿ ಮಾಲೀಕರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.



















