ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ ಸೆ. 5ರಂದು ಥಿಯೇಟರ್ ನಲ್ಲಿ ಬಿಡಗಡೆಯಾಗಿದೆ. ಆದರೆ, ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧಾಗಿದೆ.
ಈ ಚಿತ್ರ ಹೈಪ್ ಸೃಷ್ಟಿಸುವಲ್ಲಿ ವಿಫಲವಾಗಿದೆ. ಅಂದುಕೊಂಡ ಗಳಿಕೆಯನ್ನು ಮಾಡಲು ಈ ಚಿತ್ರ ವಿಫಲವಾಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ ಎನ್ನುವುದಕ್ಕೆ ಈಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದೇ ಸಾಕ್ಷಿ. ಅಕ್ಟೋಬರ್ 3ರಂದು ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆ ಕಾಣುತ್ತಿದೆ. ಈ ಕುರಿತು ನೆಟ್ಫ್ಲಿಕ್ಸ್ ಕಡೆಯಿಂದಲೇ ಮಾಹಿತಿ ಸಿಕ್ಕಿದೆ.
ಸಿಂಹ G.O.A.T ಆಗೋದನ್ನು ಯಾವಾಗಲೂ ನೋಡಿದ್ದೀರಾ? ದಳಪತಿ ವಿಜಯ್ G.O.A.T (ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಅಕ್ಟೋಬರ್ 3ರಂದು ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗುತ್ತಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಲಭ್ಯ’ ಎಂದು ನೆಟ್ ಫ್ಲಿಕ್ಸ್ ನಲ್ಲಿ ಬರೆಯಲಾಗಿದೆ.
ವೆಂಕಟ್ ಪ್ರಭು ‘ಗೋಟ್’ ಚಿತ್ರ ನಿರ್ದೇಶಿಸಿದ್ದಾರೆ. ವಿಮರ್ಶಕರಿಂದ ಒಳ್ಳೆಯ ರೀತಿಯಲ್ಲಿ ಪ್ರಕ್ರಿಯೆ ಬಂದಿಲ್ಲ. ಇದು ದಳಪತಿ ವಿಜಯ್ ಅವರ 68ನೇ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಪ್ರಶಾಂತ್, ಪ್ರಭುದೇವ, ಅಜ್ಮಲ್ ಅಮೀರ್, ಮೋಹನ್ ಸೇರಿದಂತೆ ಹಲವರು ನಟಿಸಿದ್ದಾರೆ.