ಟೆನಿಸ್ ಅಂಗಳಕ್ಕೆ ರಫೆಲ್ ನಡಾಲ್ ವಿದಾಯ ಹೇಳಿದ್ದಾರೆ.
ಡೇವಿಡ್ ಕಪ್ ಕ್ವಾರ್ಟರ್ ಫೈನಲ್ ನಲ್ಲಿ ಸ್ಪೇನ್ ವಿರುದ್ಧ ಸೋಲನುಭಿಸುವುದರ ಮೂಲಕ ರಫೆಲ್ ನಡಾಲ್ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಈ ಸೋಲಿನ ಮೂಲಕ 20 ವರ್ಷಗಳ ತಮ್ಮ ಟೆನಿಸ್ ಬದುಕಿಗೆ ಅಂತ್ಯ ಹಾಡಿದ್ದಾರೆ. ರಫೆಲ್ ನಡಾಲ್ ಅವರು 1080 ಸಿಂಗಲ್ಸ್ ಗಳಲ್ಲಿ ಜಯ ಸಾಧಿಸಿದ್ದಾರೆ. ಈ ವೇಳೆ 92 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 63 ಸಿಂಗಲ್ಸ್ ಪ್ರಶಸ್ತಿಗಳು (ಕ್ಲೇ ಕೋರ್ಟ್), 36 ಮಾಸ್ಟರ್ಸ್ ಪ್ರಶಸ್ತಿಗಳು (1000 30s), 30 ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಗಳು, 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು, 14 ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಗಳು, 2 ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
ನೊವಾಕ್ ಜೊಕೊವಿಚ್ (24) ನಂತರ ಅತ್ಯಧಿಕ ಗ್ರ್ಯಾಂಡ್ ಸ್ಲಾಮ್ ಆಟಗಾರ ಎಂಬ ದಾಖಲೆಯನ್ನು ನಡಾಲ್ ಬರೆದಿದ್ದಾರೆ. ವೃತ್ತಿ ಜೀವನದಲ್ಲಿ 22 ಗ್ರ್ಯಾಂಡ್ ಸ್ಲಾಮ್ ಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇದರ ಜೊತೆಗೆ 4 ಬಾರಿ ಯುಎಸ್ ಓಪನ್, 2 ಬಾರಿ ವಿಂಬಲ್ಡನ್ ಮತ್ತು 2 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. ಕಣ್ಣೀರಿನ ಮೂಲಕ ವಿದಾಯ ಹೇಳಿ, ಅಭಿಮಾನಿಗಳ ಮನ ಗೆದ್ದಿದ್ದಾರೆ.