ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವ್ಯಾಪಕ ಮಳೆಯಾಗುತ್ತಿದ್ದು, ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಕೆಲವೆಡೆ ಸಣ್ಣ ಅವಘಡಗಳು ಸಂಭವಿಸಿದರೆ, ಇನ್ನೂ ಹಲವೆಡೆ ಭಾರೀ ತೊಂದರೆಯೇ ಆಗಿವೆ. ಮರಗಳು ನೆಲಕ್ಕೆ ಉರುಳಿವೆ.. ವಿದ್ಯುತ್ ಕಂಬಗಳು ನೆಲಕಚ್ಚಿವೆ, ಜನ- ಜೀವನ ಅಸ್ತವ್ಯಸ್ಥವಾಗಿದೆ. ಹಲವರು ಬಲಿಯಾಗಿದ್ದಾರೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 99.5 ಮಿಮೀ ಮಳೆಯಾಗಿದೆ. ಮಂಡ್ಯ 129 ಮಿಮೀ, ರಾಮನಗರ 113.5 ಮಿಮೀ, ಕೋಲಾರ 85.5 ಮಿಮೀ, ತುಮಕೂರು 82 ಮೀಮೀ, ಮೈಸೂರು 74.5 ಮಿಮೀ., ದಕ್ಷಿಣ ಕನ್ನಡ 56 ಮಿಮೀ, ಚಿಕ್ಕಮಗಳೂರು 54.5 ಮಿಮೀ, ಚಾಮರಾಜನಗರ 52 ಮಿಮೀ, ಬೆಳಗಾವಿ 47.5 ಮಿ.ಮೀ, ಕೊಡಗು 45.5 ಮಿಮೀ, ಚಿಕ್ಕಬಳ್ಳಾಪುರ 44.5 ಮಿಮೀ, ಶಿವಮೊಗ್ಗ 24 ಮಿಮೀನಷ್ಟು ಮಳೆಯಾಗಿದೆ.
ಮೇ 1 ಹಾಗೂ 13ರ ಮಧ್ಯೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಶೇ31 ರಷ್ಟು ಹೆಚ್ಚು ಮಳೆಯಾಗಿದೆ. ಏಪ್ರಿಲ್ 1 ರಿಂದ 30 ರ ನಡುವೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಶೇ 99ರಷ್ಟು ಕಡಿಮೆ ಮಳೆಯಾಗಿದೆ. ಮೇ 1 ಮತ್ತು 13 ರ ನಡುವೆ ತುಮಕೂರು, ಚಿತ್ರದುರ್ಗ, ರಾಯಚೂರು ಮತ್ತು ಬೀದರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ ಭಾರತೀಯ ಹವಾಮಾನ ಇಲಾಖೆ ಹೇಳಿದೆ.