ಬೆಂಗಳೂರು : ಕನ್ನಡ ರಾಜ್ಯೋತ್ಸವಕ್ಕೆ ಯೆಲ್ಲೋ ಲೇನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನವೆಂಬರ್ 1ರಿಂದ ಐದನೇ ರೈಲು ಸಂಚಾರ ಮಾಡಲಿದೆ.
ಸದ್ಯ ನಾಲ್ಕು ರೈಲುಗಳೊಂದಿಗೆ ಯೆಲ್ಲೋ ಲೈನ್ ಕಾರ್ಯಾಚರಣೆಯನ್ನು ಮಾಡ್ತಿದ್ದು, ಪ್ರತಿ ರೈಲು ಸಂಚಾರದ ನಡುವೆ 19 ನಿಮಿಷಗಳ ಅಂತರವಿದೆ. ಐದನೇ ರೈಲು ಸೇರ್ಪಡೆಯಾದ್ರೆ ಅಂತರ ಇನ್ನಷ್ಟು ಕಡಿತವಾಗಲಿದ್ದು, ಐದನೇ ರೈಲು ಸಂಚಾರದಿಂದ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿದೆ. ಸದ್ಯ ಐದನೇ ರೈಲಿನ ಸುರಕ್ಷಿತ ಪರೀಕ್ಷೆ ಮುಗಿದಿದ್ದು, ಕೊನೆಯ ಹಂತದ ತಾಂತ್ರಿಕ ಪರೀಕ್ಷೆ ಕಾರ್ಯ ಸಾಗ್ತಿದೆ. ನವೆಂಬರ್ 1ರಿಂದ ಸಾರ್ವಜನಿಕ ಸೇವೆಗೆ ಈ ರೈಲು ಲಭ್ಯವಾಗಲಿದೆ.
ಆಗಸ್ಟ್ 10ರಂದು ಪ್ರಧಾನಿ ಮೋದಿ ಯೆಲ್ಲೋ ಲೈನ್‌ಗೆ ಚಾಲನೆ ಕೊಟ್ಟಿದ್ದರು. ಆರಂಭದಲ್ಲಿ ಮೂರು ರೈಲುಗಳೊಂದಿಗೆ ಸಂಚಾರ ಆರಂಭಿಸಿತ್ತು. ಅಲ್ಲದೇ 25 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಿತ್ತು. ಸೆಪ್ಟಂಬರ್ 10ರಂದು ನಾಲ್ಕನೇ ರೈಲು ಸೇರ್ಪಡೆಯಾಗಿತ್ತು. ಅದಾದ ನಂತರ ಪ್ರತಿ 19 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಿತ್ತು. ಈಗ ಐದನೇ ರೈಲು ಬೋಗಿಗಳು ಯೆಲ್ಲೋ ಲೈನ್ ತಲುಪಿದ್ದು, ನವೆಂಬರ್ ತಿಂಗಳಿಂದ ಕಾರ್ಯಾಚರಣೆ ಮಾಡಲಿದೆ. ಐದನೇ ರೈಲು ಸಂಚಾರಿಸಿದ್ರೆ ಪ್ರತಿ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿದೆ.
ಇದನ್ನೂ ಓದಿ : ICC ODI Rankings | ವಿಶ್ವ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ – ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ಹಿಟ್‌ಮ್ಯಾನ್!



















