ಬೆಂಗಳೂರು: ರಾಜ್ಯ ಸರ್ಕಾರ ಗುರುವಾರವಷ್ಟೇ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ. 15ರಷ್ಟು ಏರಿಕೆ ಮಾಡಿದೆ. ಈ ಮಧ್ಯೆ ಸಾರಿಗೆ ಸಿಬ್ಬಂದಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಕೆಲವು ವರ್ಷಗಳಿಂದ ಸಾರಿಗೆ ಸಿಬ್ಬಂದಿಗೆ ಪಿಎಫ್ ಹಣ ನೀಡಲು ಇಲಾಖೆ ಹೆಣಗಾಡುತ್ತಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಪಿಎಫ್ ಹಣಕ್ಕಾಗಿ 2 ಸಾವಿರ ಕೋಟಿ ರೂ. ನೀಡಲು ಒಪ್ಪಿಗೆ ನೀಡಿದ್ದಾರೆ.
ಈಗ ಸರ್ಕಾರವು ಸಾರಿಗೆ ಸಿಬ್ಬಂದಿಗಳ ಪಿಎಫ್ ಟ್ರಸ್ಟ್ ಗೆ ಎರಡು ಸಾವಿರ ಕೋಟಿ ರೂ. ನೀಡಲು ಮುಂದಾಗಿದೆ. ಈ ಕುರಿತು ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಸದ್ಯಕ್ಕೆ ನಾಲ್ಕು ನಿಗಮಗಳು ಬ್ಯಾಂಕ್ ನಿಂದ ಸಾಲ ಪಡೆದು, ಪಿಎಫ್ ಟ್ರಸ್ಟ್ಗೆ ಹಣ ನೀಡಲಿವೆ. ಆನಂತರ ಫೆಬ್ರವರಿಯಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್ ನಲ್ಲಿ ಎರಡು ಸಾವಿರ ಕೋಟಿ ರೂ. ಅನುದಾನ ಪಡೆದು, ಅಸಲು ಮತ್ತು ಬಡ್ಡಿ ಸಮೇತ ತೀರಿಸಲಿವೆ ಎನ್ನಲಾಗಿದೆ.
ಹೀಗಿಗ ಕೆಎಸ್ ಆರ್ ಟಿಸಿಗೆ – 623.80 ಕೋಟಿ ರೂ., ಬಿಎಂಟಿಸಿಗೆ – 589.20 ಕೋಟಿ ರೂ., ಎನ್ಡಬ್ಲೂಕೆಆರ್ಟಿಸಿಗೆ – 646.00 ಕೋಟಿ ರೂ., ಕೆಕೆಆರ್ಟಿಸಿಗೆ – 141 ಕೋಟಿ ರೂಪಾಯಿ ಹಣ ಸಿಗಲಿದೆ.


















