ಬೆಂಗಳೂರು: ಬ್ಯಾಡ್ ನ್ಯೂಸ್ ಭೀತಿಯಲ್ಲಿದ್ದ ಬೆಂಗಳೂರಿಗರಿಗೆ BWSSBಯಿಂದ ಗುಡ್ ನ್ಯೂಸ್ ಸಿಕ್ಕಿದೆ.
ಈಗ BWSSBಯಿಂದ ಬಾಕಿ ಬಿಲ್ ಪಾವತಿದಾರರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಈಗಾಗಲೇ ಪಾಲಿಕೆಯಿಂದ ಬಾಕಿ ತೆರಿಗೆಗೆ ದಂಡ ಹಾಗೂ ಬಡ್ಡಿ ಮನ್ನಾ ಮಾಡಿ ಸುಮಾರು 1 ಸಾವಿರ ಕೋಟಿ ರೂ. ಬಾಕಿ ಹಣ ವಸೂಲಿ ಮಾಡಲಾಗಿತ್ತು.
ಇನ್ನೊಂದೆಡೆ ಸಂಚಾರಿ ಪೊಲೀಸರು ಕೂಡ ದಂಡದಲ್ಲಿ ಶೇ. 50ರಷ್ಟು ಡಿಸ್ಕೌಂಟ್ ನೀಡಿ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದರು. ಇದೇ ಹಾದಿಯಲ್ಲಿ ನಡೆಯಲು ಮುಂದಾಗಿರುವ ಬಿಡಬ್ಲ್ಯೂಎಸ್ಎಸ್ಬಿ, ಕಾವೇರಿ ನೀರಿನ ಬಾಕಿ ಬಿಲ್ ಪಾವತಿಗೂ ಡಿಸ್ಕೌಂಟ್ ನೀಡಲು ಚಿಂತನೆ ನಡೆಸಿದೆ. ಗ್ರಾಹಕರ ಬಾಕಿ ಬಾಕಿ ಮೊತ್ತಕ್ಕೆ ಓಟಿಎಸ್ ಅಥವಾ ಶೇ. 50ರ ಮಾದರಿಯಲ್ಲೇ ಚಿಂತನೆ ನಡೆಸಿದೆ.
ಮಂಡಳಿಗೆ 600 ಕೋಟಿ ರೂ. ನೀರಿನ ಬಿಲ್ ಬಾಕಿ ಬರಬೇಕಿದೆ. ಈ ಪೈಕಿ ಅಪಾರ್ಟ್ಮೆಂಟ್, ಮನೆಗಳು, ಕೇಂದ್ರ, ರಾಜ್ಯ ಸರ್ಕಾರದ ಕಚೇರಿಗಳಿಂದಲೇ ಬಿಲ್ ಬಾಕಿ ಹೆಚ್ಚಿದೆ. ಅತ್ತ ಸಂಸ್ಥೆ ಕೂಡ ಪ್ರತಿ ತಿಂಗಳು ಖರ್ಚು ವೆಚ್ಚದ ಹಾದಿಯಾಗಿ 40 ಕೋಟಿ ರೂ.ಗೂ ಅಧಿಕ ಹಣಕ್ಕಾಗಿ ಸರ್ಕಾರದ ಮೇಲೆ ಅವಲಂಬನೆಯಾಗಿದೆ. ಈ ಬಗ್ಗೆ ಮೊದಲು ಮಂಡಳಿಯಲ್ಲಿ ತೀರ್ಮಾನ ಕೈಗೊಂಡಿದ್ದು, ಕೂಡಲೇ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಲಾಗಿದೆ.
ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಮಾಹಿತಿ ನೀಡಿದ್ದು, ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ನೀರಿನ ಬಿಲ್ ಗೆ ಓಟಿಎಸ್ ಮಾದರಿ ನೀಡಲು ತಯಾರಿ ಮಾಡಲಾಗಿದೆ.