ಬೆಂಗಳೂರು: ಬ್ಯಾಂಕ್ ಸಾಲ ಪಡೆದೋ, ಮನೆಯಲ್ಲಿದ್ದ ಬಂಗಾರವನ್ನು ಮಾರಾಟ ಮಾಡಿಯೋ ಮನೆ ಕಟ್ಟಿಸಿರುತ್ತೇವೆ. ಇಲ್ಲವೇ ಅಪಾರ್ಟ್ ಮೆಂಟ್ ಖರೀದಿಸುವ ಯೋಚನೆ ಇರುತ್ತದೆ. ಆಗ ಡೌನ್ ಪೇಮೆಂಟ್, ಅಪಾರ್ಟ್ ಮೆಂಟಿನ ಇಎಂಐ ಪಾವತಿಸುವುದು ಸೇರಿ ಹಲವು ಕಾರಣಗಳಿಗಾಗಿ ಹಣ ಬೇಕಿರುತ್ತದೆ. ಇದನ್ನು ಮನಗಂಡ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒಡ) ಮನೆ ನಿರ್ಮಾಣಕ್ಕಾಗಿ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಶೇ.90ಕ್ಕೆ ಏರಿಕೆ ಮಾಡಿದೆ.
ಹೌದು, ಮನೆ ಖರೀದಿ, ಕಟ್ಟಿಸುವವರಿಗಾಗಿಯೇ ಇಪಿಎಫ್ಒ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಅನ್ವಯ, ಇಪಿಎಫ್ಒ ಸದಸ್ಯರು, ತಮ್ಮ ಪಿಎಫ್ ಮೊತ್ತದ ಶೇ.90ರಷ್ಟು ಹಣವನ್ನು ಈಗ ವಿತ್ ಡ್ರಾ ಮಾಡಬಹುದಾಗಿದೆ. ಆ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಹೊಸ ಮನೆಯನ್ನು ಖರೀದಿಸಬಹುದಾಗಿದೆ.
3 ವರ್ಷಗಳ ಮಿತಿ ಸಡಿಲ
ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಇದ್ದ ವರ್ಷಗಳ ಮಿತಿಯನ್ನೂ ಇಪಿಎಫ್ಒ ಸಡಿಲಗೊಳಿಸಿದೆ. ಇದಕ್ಕೂ ಮೊದಲು ಉದ್ಯೋಗಕ್ಕೆ ಸೇರಿದ ಅಂದರೆ, ಇಪಿಎಫ್ಒಬ ಸದಸ್ಯರಾಗಿ ಯದು ವರ್ಷ ಕಳೆದ ನಂತರವೇ ಮನೆ ಕಟ್ಟಲು ಹಣವನ್ನು ವಿತ್ ಡ್ರಾ ಮಾಡಬಹುದಾಗಿತ್ತು. ಆದರೆ, ಈಗ ಈ ಐದು ವರ್ಷಗಳ ನಿಯಮವನ್ನು ಮೂರು ವರ್ಷಕ್ಕೆ ಇಳಿಸಲಾಗಿದೆ. ಇದರಿಂದಾಗಿ ಇಪಿಎಫ್ಒ ಸದಸ್ಯರು ಮೂರು ವರ್ಷಗಳಲ್ಲೇ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ.
ವಿತ್ ಡ್ರಾ ಮಿತಿ ಹೆಚ್ಚಳ
ಸದಸ್ಯರಿಗೆ ಅನುಕೂಲವಾಗಲಿ ಎಂದು ಇತ್ತೀಚೆಗೆ ಇಪಿಎಫ್ಒ ಹಲವು ಬದಲಾವಣೆ ಮಾಡಿದೆ. ಅದರಲ್ಲೂ, ಆಟೋ ಸೆಟಲ್ ಮೆಂಟ್ ಮೂಲಕ ಪಿಎಫ್ ವಿತ್ ಡ್ರಾ ಮಿತಿಯನ್ನು ಏರಿಕೆ ಮಾಡಿದ್ದು ಕೂಡ ಗಮನಾರ್ಹ ಸಂಗತಿಯಾಗಿದೆ. ಹೌದು, ಇದಕ್ಕೂ ಮೊದಲು ಆಟೋ ಸೆಟಲ್ ಮೆಂಟ್ ಮೂಲಕ ಒಂದು ಲಕ್ಷ ರೂಪಾಯಿಯನ್ನು ಮಾತ್ರ ವಿತ್ ಡ್ರಾ ಮಾಡಬಹುದಿತ್ತು. ಆದರೆ, ಇದನ್ನು ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ, ಇಪಿಎಫ್ಒೋ ಸದಸ್ಯರು ಆಟೋ ಸೆಟಲ್ ಮೆಂಟ್ ಮೂಲಕ ಈಗ ಐದು ಲಕ್ಷ ರೂಪಾಯಿವರೆಗೆ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಬಹುದು.



















