ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ನಟಿ ರನ್ಯಾ ರಾವ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಎ1 ರನ್ಯಾ ಹಾಗೂ ಎ2ತರುಣ್ ಕೊಂಡಾರು ರಾಜುಗೆ ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಡಿಆರ್ ಐ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸದ ಹಿನ್ನಲೆಯಲ್ಲಿ ಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ತಲಾ ಇಬ್ಬರು ಶ್ಯೂರಿಟಿ, ಎರಡು ಲಕ್ಷ ರೂ. ಬಾಂಡ್, ದೇಶ ಬಿಟ್ಟು ಹೋಗುವಂತಿಲ್ಲ. ಇದೇ ರೀತಿ ಅಪರಾಧ ಎಸಗಬಾರದು ಎಂದು ಷರತ್ತು ವಿಧಿಸಿ ನ್ಯಾಯಧೀಶರಾದ ವಿಶ್ವನಾಥ್ ಸಿ.ಗೌಡರ್ ಆದೇಶ ನೀಡಿದ್ದಾರೆ. ರನ್ಯಾ ಪರ ವಕೀಲ ಬಿ.ಎಸ್ ಗಿರೀಶ್ ವಾದಿಸಿದ್ದಾರೆ.
ಆದರೆ, ರನ್ಯಾಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ ಎನ್ನಲಾಗುತ್ತಿದೆ. ಏಕೆಂದರೆ ರನ್ಯಾ ವಿರುದ್ಧ ಕಾಪಿಪೋಸಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಕಾಪಿಪೋಸಾ ಕೇಸ್ ನಲ್ಲಿ ಜಾಮೀನು ಸಿಗುವವರೆಗೂ ರನ್ಯಾಗೆ ಬಿಡುಗಡೆ ಭಾಗ್ಯ ಇಲ್ಲವಾಗಿದೆ.