ಬೆಂಗಳೂರು: ಯುಗಾದಿ ಹಬ್ಬದ ಶುಭದಿನದಂದು ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ಲಭಿಸಿದೆ. ಕಳೆದ ಮೂರು ದಿನಗಳಿಂದ ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಾಗಾಗಿ, ಭಾನುವಾರ ಚಿನ್ನ ಖರೀದಿ ಮಾಡುವವರಿಗೆ ಬೆಲೆಯ ಏರಿಕೆಯ ಬಿಸಿ ತಾಗುವುದಿಲ್ಲ. ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 8,360 ಇದೆ. 24 ಕ್ಯಾರಟ್ ಚಿನ್ನದ ಬೆಲೆ 9,120 ರೂ. ಹಾಗೂ 18 ಕ್ಯಾರಟ್ ನ ಚಿನ್ನದ ಬೆಲೆ 6,840 ರೂ. ಇದೆ.
ಶನಿವಾರ 22 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 20 ರೂ. ಏರಿಕೆಯಾಗಿತ್ತು. ಇದರಿಂದಾಗಿ ಒಂದು ಗ್ರಾಂಗೆ 8,360 ರೂ.ಗೆ ಏರಿಕೆಯಾಗಿತ್ತು. ಭಾನುವಾರ 22 ಕ್ಯಾರಟ್ ನ ಚಿನ್ನದ ಬೆಲೆ 10 ಗ್ರಾಂಗೆ 83,600 ರೂ. ಇದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,840 ರೂ. ಇದೆ. ಶನಿವಾರ ಒಂದು ಗ್ರಾಂಗೆ 16 ರೂ. ಏರಿಕೆಯಾಗಿತ್ತು. 18 ಕ್ಯಾರಟ್ ನ ಚಿನ್ನದ ಬೆಲೆ 10 ಗ್ರಾಂಗೆ 68,400 ರೂ. ಇದೆ.
24 ಕ್ಯಾರಟ್ ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,120 ರೂ. ಇದೆ. ಶನಿವಾರ ಪ್ರತಿ ಗ್ರಾಂಗೆ 22 ರೂ. ಏರಿಕೆಯಾಗಿತ್ತು. 24 ಕ್ಯಾರಟ್ ನ ಚಿನ್ನದ ಬೆಲೆ 10 ಗ್ರಾಂಗೆ 91,200 ರೂ. ಇದೆ. ಮಾರ್ಚ್ 26ರಿಂದ ಮಾರ್ಚ್ 28ರವರೆಗೆ ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆಯಾಗಿತ್ತು. ಮಾರ್ಚ್ 24 ಹಾಗೂ 25ರಂದು ಒಂದು ಗ್ರಾಂ ಚಿನ್ನದ ಬೆಲೆಯು ಕ್ರಮವಾಗಿ 15 ಹಾಗೂ 30 ರೂ. ಇಳಿಕೆಯಾಗಿತ್ತು. ಈಗ ಸತತ ಏರಿಕೆಯ ಬಳಿಕ ಬೆಲೆ ಸ್ಥಿರತೆ ಕಾಪಾಡಿಕೊಂಡಿರುವುದು ತುಸು ಸಮಾಧಾನದ ಸಂಗತಿಯಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲೂ ಭಾನುವಾರ ಯಾವುದೇ ವ್ಯತ್ಯಾಸ ಉಂಟಾಗಿಲ್ಲ. ಒಂದು ಗ್ರಾಂ ಬೆಳ್ಳಿಗೆ 104 ರೂ. ಇದೆ. ಒಂದು ಕೆ.ಜಿಗೆ 1.04 ಲಕ್ಷ ರೂ. ಇದೆ. ಬೆಳ್ಳಿಯು ಕೂಡ ಕಳೆದ ಒಂದು ವಾರದಲ್ಲಿ ಒಂದು ಕೆ.ಜಿಗೆ 4 ಸಾವಿರ ರೂ. ಏರಿಕೆಯಾಗಿದೆ. ಹಬ್ಬದ ಖರೀದಿ ಜೋರಾದ ಹಿನ್ನೆಲೆಯಲ್ಲಿ ಬೆಲೆ ಜಾಸ್ತಿಯಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.