ಬೆಂಗಳೂರು: ಲಕ್ಷ ರೂ. ಗಡಿದಾಟಿ ಮುನ್ನುಗ್ಗುತ್ತಿರುವ ಚಿನ್ನ ಹಾಗೂ ಬೆಳ್ಳಿ ಸೋಮವಾರ ಮಾರುಕಟ್ಟೆಯಲ್ಲಿ ಕೊಂಚ ಸೊರಗಿದೆ. ಆದರೆ, ಚಿನ್ನಪ್ರಿಯರು ಖುಷಿ ಪಡುವಷ್ಟು ಮಾತ್ರ ಸೊರಗಿಲ್ಲ. ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ 1 ರೂ. ಇಳಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಗ್ರಾಂಗೆ 128 ರೂ.ನಿಂದ 127 ರೂ. ಗೆ ಇಳಿಕೆಯಾಗಿದೆ. ಅಪರಂಜಿ ಚಿನ್ನದ ಬೆಲೆ 10,800 ರೂ ಗಡಿ ದಾಟಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 99,350 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 1,08,380 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 12,700 ರೂ. ಆಗಿದೆ. ಬೆಂಗಳೂರು ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ 99,350 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 12,700 ರೂ. ಇದೆ.
ದೇಶದಲ್ಲಿ ಸೆ. 8ಕ್ಕೆ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 99,350 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 1,08,380 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 81,290 ರೂ
ಬೆಳ್ಳಿ ಬೆಲೆ 10 ಗ್ರಾಂಗೆ 1,270 ರೂ
ನಾವು ನೀಡಿರುವ ಮಾಹಿತಿ ನೂರಕ್ಕೆ ನೂರು ನಿಖರ ಎಂದು ಹೇಳಲು ಆಗಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ. ಆದರೆ, ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಇನ್ನಿತರ ಶುಲ್ಕಗಳನ್ನು ಕೂಡ ಅಂಗಡಿ ಮಾಲೀಕರು ಹಾಕಿರುತ್ತಾರೆ. ಹೀಗಾಗಿ ನಮ್ಮದೇ ದರ ಅಂತಿಮ ಎಂದು ಹೇಳಲು ಆಗುವುದಿಲ್ಲ.