ಬೆಂಗಳೂರು | ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ವೀಕ್ಷಕರು ಬಯಸಿದಂತೆ ಗಿಲ್ಲಿ ನಟ 12ನೇ ಸೀಸನ್‌ನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ವಿನ್ನರ್ ವಿಷಯದಲ್ಲಿ ವೀಕ್ಷಕರ ಲೆಕ್ಕಾಚಾರ ಸರಿಯಾಗಿದೆ. ಇನ್ನೊಂದು ಕಡೆ ಶಿವಣ್ಣ ಕೂಡ ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲಿಯೇ ಎಂದು ಹೇಳಿದ್ದರು. ಅವರು ನುಡಿದಂತೆ ಗಿಲ್ಲಿ ಬಿಗ್ ಬಾಸ್ ಅನ್ನು ಗೆದ್ದು ಬೀಗಿದ್ದಾರೆ.
ಬಿಗ್ ಬಾಸ್ ಕನ್ನಡ 12 ಅನ್ನು ಗೆದ್ದ ಬಳಿಕ ಗಿಲ್ಲಿ ನಟ ನೇರವಾಗಿ ಶಿವಣ್ಣನ ಮನೆಗೆ ತೆರಳಿದ್ದಾರೆ. ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಶಿವಣ್ಣ ಕೂಡ ಅವರ ಫ್ಯಾನ್ ಆಗಿದ್ದರು. ಹೀಗಾಗಿ ನೇರವಾಗಿ ನಾಗಾವರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಮನೆಗೆ ತೆರಳಿ ಅವರ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಿಗ್ ಬಾಸ್‌ಗೂ ಮುನ್ನವೇ ಗಿಲ್ಲಿಯ ಪ್ರತಿಭೆಯನ್ನು ಶಿವಣ್ಣ ನೋಡಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ನಟ ಪರ್ಫಾಮೆನ್ಸ್ ನೀಡಿದ್ದರು. ಶಿವಣ್ಣ ಅತಿಥಿಯಾಗಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಪ್ರಾಪರ್ಟಿ ಕಾಮಿಡಿ ಮಾಡುವ ಮೂಲಕ ಸೆಂಚುರಿ ಸ್ಟಾರ್ ಮನಗೆದ್ದಿದ್ದರು. ಅಲ್ಲಿ ಗಿಲ್ಲಿಯ ಟ್ಯಾಲೆಂಟ್ ನೋಡಿದ್ದ ಶಿವಣ್ಣ ಮೆಚ್ಚುಗೆಯನ್ನೂ ಸೂಚಿಸಿದ್ದರು.
ಇನ್ನು ನಟ ಸುದೀಪ್ ಅವರನ್ನೂ ಗಿಲ್ಲಿ ಭೇಟಿ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರೋವಾಗ ಎಲ್ಲ ವಿಷಯಗಳನ್ನು ಸುದೀಪ್ ಮನಬಿಚ್ಚಿ ಮಾತನಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಗಿಲ್ಲಿ ಹೋಗಿ ಸುದೀಪ್ನ ಭೇಟಿ ಮಾಡಿದ್ದಾರೆ. ಗಿಲ್ಲಿ ಅಭಿಮಾನಿಗಳು ಸುದೀಪ್ ಅವರ ಬಗ್ಗೆ ಈ ಮೊದಲು ಅಸಮಾಧಾನ ಹೊರಹಾಕಿದ್ದು ಇದೆ. ಇದಕ್ಕೆ ಕಾರಣ ಆಗಿದ್ದು ಸೀಸನ್ ಚಪ್ಪಾಳೆ. ಈ ವಿಷಯದಲ್ಲಿ ಗಿಲ್ಲಿ ಅವರು ಅಭಿಮಾನಿಗಳ ಪರವಾಗಿ ಸುದೀಪ್ ಬಳಿ ಕ್ಷಮೆ ಕೇಳಿರಬಹುದು ಎಂದು ಊಹಿಸಲಾಗುತ್ತಿದೆ.
ಒಟ್ಟಿನಲ್ಲಿ ಸುದೀಪ್ ಹಾಗೂ ಶಿವರಾಜ್ಕುಮಾರ್ ಅವರು ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಮನಸ್ಫೂರ್ತಿಯಾಗಿ ಹಾರೈಸಿದ್ದಾರೆ. ಈ ಹಾರೈಕೆಯಿಂದ ಅವರು ತುಂಬಾನೇ ಖುಷಿಪಟ್ಟಿದ್ದಾರೆ. ಇನ್ನಷ್ಟು ಸಿನಿಮಾ ಆಫರ್ಗಳು ಅವರನ್ನು ಹುಡುಕಿ ಬರೋ ಸಾಧ್ಯತೆ ಇದೆ.
ಇದನ್ನೂ ಓದಿ : ರಾಯಚೂರಿನಲ್ಲಿ ಭೀಕರ ಅಪಘಾತ | ಐವರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ!



















