ಬೆಂಗಳೂರು : ಗಾರ್ಡನ್ ಸಿಟಿಯಲ್ಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಜಿಬಿಎ ಹೊಸ ಪ್ರಯೋಗವನ್ನು ಯೋಜಿಸಿದೆ. ರಾಜಧಾನಿಯ ಹಲವು ಕಡೆಗಳಲ್ಲಿ ಕಸದ ಕಿಯೋಸ್ಕ್ ನಿರ್ಮಾಣಕ್ಕೆ ನಿರ್ಧರಿಸಿ, ಕಸದ ಸಮಸ್ಯೆಗೆ ಮುಕ್ತಿ ನೀಡಲು ಪ್ಲಾನ್ ಮಾಡಿದೆ.
ಇಷ್ಟು ದಿನ ಎಲ್ಲೆಂದರಲ್ಲಿ ಕಸ ಎಸೆದವರ ಮನೆ ಮುಂದೆ ಕಸ ಸುರಿದು ದಂಡ ವಸೂಲಿ ಮಾಡುತ್ತಿದ್ದ ಜಿಬಿಎ ಇದೀಗ ಪ್ರತಿ ರಸ್ತೆಯ ಮೂಲೆಗಳಲ್ಲಿ ಬೃಹತ್ ಗಾತ್ರದ ಕಸದ ಡಬ್ಬಿ ಇಡುವಂತೆ ನಿರ್ಧರಿಸಿದೆ.
ಈ ಹಿಂದೆ ಕಸ ಎಸೆದವರ ಮನೆ ಮುಂದೆ ಕಸ ಹಾಕುವ ಅಭಿಯಾನದಲ್ಲಿ ತಿಳಿದ ಮಾಹಿತಿ ಪ್ರಕಾರ ಬೆಳಿಗ್ಗಿನ ಜಾವ ಕೆಲಸ ಕಾರ್ಯಗಳಿಗೆ ಹೋಗುವರು ಕಸ ರಸ್ತೆ ಬದಿ ಎಸೆಯುತ್ತಿದ್ದರು. ಕಸದ ಆಟೋ ಬೆಳಿಗ್ಗೆ 7-8 ಗಂಟೆಗೆ ಮನೆ ಹತ್ತಿರ ಬರುತ್ತದೆ. ಇದರಿಂದ ಬೆಳಿಗ್ಗೆ ಕೆಲಸಕ್ಕೆ ಹೋಗುವರು ಕಸದ ಆಟೋಗೆ ಕೊಡಲು ಸಾಧ್ಯವಿಲ್ಲ ಎಂಬ ಮಾಹಿತಿ ಗೋಚರಿಸಿದೆ.
ಇದಕ್ಕೆ ಜಿಬಿಎ ಬಿಗ್ ಬ್ರೇಕ್ ಕೊಟ್ಟು, ರಸ್ತೆ ಮೂಲೆಯಲ್ಲಿ ಹಸಿ ಕಸ, ಒಣ ಕಸ ಎಂಬ ಎರಡು ಬೃಹತ್ ಗಾತ್ರದ ಡಬ್ ಇಟ್ಟು, ಕಸ ಸುರಿಯಲು ಅವಕಾಶ ಕಲ್ಪಿಸಿದೆ. ಇದರಿಂದ ಕಸ ರಸ್ತೆಗೆ ಎಸೆಯುವ ಕಾಟ ತಪ್ಪಿಸಬಹುದು ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬುಲೆಟ್‌ಗೆ 650cc ಶಕ್ತಿ : ರಾಯಲ್ ಎನ್‌ಫೀಲ್ಡ್‌ನ ಐಕಾನಿಕ್ ಬೈಕ್ ಈಗ ಮತ್ತಷ್ಟು ಪವರ್‌ಫುಲ್!



















