ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ಧಿಕಿಯನ್ನ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ರಾತ್ರಿ 9:30ರ ಹೊತ್ತಿಗೆ ಪುತ್ರನ ಕಚೇರಿಯಿಂದ ಹೊರ ಬರುತ್ತಿದ್ದ ಸಿದ್ಧಿಕಿಯನ್ನು ಮನ ಬಂದಂತೆ ಶೂಟ್ ಮಾಡಿ ಕೊಲ್ಲಲಾಗಿತ್ತು. ಇಬ್ಬರು ಹಂತಕರು ಸ್ಥಳದಲ್ಲೇ ಬಂಧಿತರಾಗಿದ್ದಾರೆ.
ಅಸಲಿಗೆ, ಮೃತ ಬಾಬಾ ಸಿದ್ಧಿಕಿ ಮತ್ತು ನಟ ಸಲ್ಮಾನ್ ಖಾನ್ ಆಪ್ತ ಸ್ನೇಹಿತರಾಗಿದ್ದು, ಅದುವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಸಲ್ಮಾನ್ ಖಾನ್ ಹಾಗೂ ಗ್ಯಾಂಗ್ ಸ್ಟರ್ ಬಿಷ್ಣೋಯಿ ನಡುವೆ ತೆರೆಮರೆ ಗುದ್ದಾಟ ನಡೆಯುತ್ತಿತ್ತು ಎನ್ನಲಾಗಿದೆ. ಬಿಷ್ಣೋಯಿ ಸಲ್ಮಾನ್ ಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಮೊದಲ ಹೆಜ್ಜೆಯಾಗಿ ಈ ಹತ್ಯೆ ಎಂಬಂತೆ ಬಿಷ್ಣೋಯಿ ಸಿದ್ಧಿಕಿ ಕೊಲೆ ಆರೋಪ ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ.

ಸದ್ಯ ದೊಡ್ಡವರನ್ನೇ ಟಾರ್ಗೆಟ್ ಮಾಡಿಕೊಂಡು ಹಪ್ತಾ, ಸುಲಿಗೆ, ಕೊಲೆಗಳ ಮೂಲಕ ಮುಂಬೈ ಭೂಗತ ಲೋಕದ ಹಿಡಿತ ಸಾಧಿಸುವ ಹುನ್ನಾರದಲ್ಲಿ ಬಿಷ್ಣೋಯಿ ಇದಅದಂತಿದೆ. ಪೊಲೀಸರ ಮಾಹಿತಿಯಂತೆ ಅದೇ ಆತನ ಹವಣಿಕೆಯಂತೆ. ನೇಪತ್ಯಕ್ಕೆ ಸರಿದಿರೋ ಡಾನ್ ದಾವೂದ್ ದಾರಿಯಲ್ಲೇ ತಾನೂ ಸಾಗಿ, ಮುಂಬೈ ಭೂಗತಲೋಕದ ಅನಭಿಶಕ್ತ ದೊರೆ ಎನಿಸಿಕೊಳ್ಳುಮ ಹುಚ್ಚು ಹಪಾ-ಹಪಿಗೆ ಬಿಷ್ಣೋಯಿ ಬಿದ್ದಂತಿದೆ. ಕಾಲವೇ ಉತ್ತರಿಸಲಿ!!!