ಬೆಂಗಳೂರು: ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿ ಪರಿಚಯ ಮಾಡಿಕೊಂಡು ಮನೆಗಳ್ಳತನ ಮಾಡಿರುವ ಘಟನೆಯೊಂದು ನಡೆದಿದೆ.
ಸಿಲಿಕಾನ್ ಸಿಟಿಯ ಹುಳಿಮಾವು ಪೊಲೀಸ್ ಠಾಣಾ(police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಹೀದಾಭಾನು ಎಂಬ ಮಹಿಳೆ ವಂಚಿಸಿದ ಆರೋಪಿ. ಮನೆಯ ಮುಂದೆ ಜನರಲ್ ಸ್ಟೋರ್ ಇಟ್ಟುಕೊಂಡು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧೆಯನ್ನು ಅಂಗಡಿಗೆ ಹೋಗಿ ಬಂದು ಸಹೀದ ಭಾನು ಪರಿಚಯ ಮಾಡಿಕೊಂಡಿದ್ದಾಳೆ.
ಹೀಗೆ ಪರಿಚಯ ಮಾಡಿಕೊಂಡು ಗ್ರಾಹಕರು ಇದ್ದ ಸಂದರ್ಭದಲ್ಲಿ ಅಂಗಡಿಗೆ ಹೋಗಿ, ಬಾತ್ ರೂಂಗೆ ಹೋಗಬೇಕು ಮನೆಯ ಕೀ ಕೊಡಿ ಎಂದು ಮನೆಯ ಒಳಗೆ ಹೋಗಿ ಕಳ್ಳತನ ಮಾಡಿದ್ದಾಳೆ. ಮನೆ ಒಳಗೆ ಹೋಗಿ ಚಿನ್ನಭರಣ ಕದ್ದು ಪರಾರಿಯಾಗಿದ್ದಾಳೆ. ಈ ಕುರಿತು ವೃದ್ಧೆ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ಸಹೀದಾ ಭಾನು ಬಂಧಿಸಿ 136 ಗ್ರಾಂ ಚಿನ್ನಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.