ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆಯೊಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಸಂಧ್ಯಾ ಪವಿತ್ರ ನಾಗರಾಜ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ ರಾಜೇಶ್ ಕೆ. ಎಂಬ ವ್ಯಕ್ತಿ ಮೋಸ ಹೋದವರು ಎನ್ನಲಾಗಿದೆ. ಹೆಲ್ಪಲೈನ್ ಹೆಸರಿನಲ್ಲಿ ವಂಚಿಸಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಕ ವೃತ್ತಿ ಮಾಡಿಕೊಂಡಿದ್ದ ರಾಜೇಶ್, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಈ ವೇಳೆ ಸಂಧ್ಯಾ ಪವಿತ್ರ ನಾಗರಾಜ್ ಪರಿಚಯವಾಗಿದೆ. ಈ ವೇಳೆ ಹೋರಾಟಗಾರ್ತಿ ಎಂದು ಸಂಧ್ಯಾ ಪರಿಚಯ ಮಾಡಿಕೊಂಡಿದ್ದಾರೆ.
ಅಲ್ಲದೇ, ಸಮಾಜ ಸೇವೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ, ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ರಾಜೇಶ್ ಸಂಧ್ಯಾಗೆ ಹೇಳಿದ್ದಾರೆ. ಇದನ್ನು ಹೈಕೋರ್ಟ್ ನಲ್ಲಿ ಬಗೆಹರಿಸುವುದಾಗಿ ಹೇಳಿ, 3.20 ಲಕ್ಷ ರೂ. ಪಡೆದಿದ್ದಾರೆ. ಆದರೆ, ಸಮಸ್ಯೆ ಇತ್ಯರ್ಥವಾಗಿಲ್ಲ. ಸಂಶಯಗೊಂಡು ರಾಜೇಶ್ ಪ್ರಶ್ನಿಸಿದಾಗ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ರಾಜೇಶ್ ಹಣ ಕೇಳಿದ್ದಾರೆ. ಆದರೆ, ಹಣ ಕೊಡದೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜೇಶ್ ದೂರು ದಾಖಲಿಸಿದ್ದಾರೆ.