ತುಮಕೂರು: ಗಾಂಜಾ ಮಾರುತ್ತಿದ್ದ ನಾಲ್ವರು ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಕೊರಟಗೆರೆ (Koratagere) ಪಟ್ಟಣ ಸೇರಿದಂತೆ ತುಮಕೂರು (Tumakuru) ತಾಲೂಕಿನ ಕೆಲವೆಡೆಗಳಲ್ಲಿ ಗಾಂಜಾ (Marijuana) ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಕ್ಯಾತಸಂದ್ರ ನಿವಾಸಿ ಚೇತನ್, ಗೋಕುಲ ಬಡಾವಣೆಯ ನಾಗರಾಜು, ಊರುಕೆರೆಯ ಪ್ರೀತಂ, ಊರುಕೆರೆ ಚೆಕ್‌ಪೋಸ್ಟ್ ಬಳಿಯ ಸಿಂಗಾವೇಲು ಬಂಧಿತ ಆರೋಪಿಗಳು. ಬಂಧಿತರು ಬೇರೆಡೆಯಿಂದ ಗಾಂಜಾವನ್ನು ಪ್ಯಾಕೆಟ್‌ಗಳಲ್ಲಿ ತಂದು ಪಟ್ಟಣ ಸೇರಿದಂತೆ ಹಲವೆಡೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಪಟ್ಟಣದ ಹೊರವಲಯದ ಬೈಲಾಂಜನೇಯ ದೇವಸ್ಥಾನದ ಹತ್ತಿರ ಪ್ಯಾಕ್‌ಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.