ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ದೂರುದಾರ, ಸಾಮಾಜಿಕ ಹೋರಾಟಗಾರ ಜಯಂತ್ ಈಗ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ದೂರು ನೀಡುವುದಕ್ಕೂ ಮುನ್ನ ದೆಹಲಿಗೆ ಕರೆದುಕೊಂಡು ಹೋಗಿದ್ದೇವು ಎಂದು ಮಾಹಿತಿ ನೀಡಿದ್ದಾರೆ.
ಬುರುಡೆಯನ್ನು ಮೊದಲಿಗೆ ಸುಪ್ರೀಂ ಕೋರ್ಟ್ ತೆಗೆದುಕೊಂಡು ಹೋಗಲು ನಿರ್ಧರಿಸಿ ನಾವು ನಾಲ್ವರು, ಅಂದರೆ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ, ಸುಜಾತಾ ಭಟ್ ಹಾಗೂ ನಾನು ದೆಹಲಿಗೆ ಕಾರಿನಲ್ಲಿ ಹೋಗಿದ್ದೇವು. ಆದರೆ ಅಲ್ಲಿ ನಮ್ಮ ಯೋಜನೆ ಸಫಲವಾಗದ ಕಾರಣ ಬುರುಡೆಯನ್ನು ವಾಪಸ್ ತರಲಾಯಿತು ಎಂದು ಜಯಂತ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ನನ್ನ ಮನೆಯಲ್ಲಿ ಚಿನ್ನಯ್ಯ ಮೂರು ದಿನಗಳ ಕಾಲ ಇದ್ದ. ಆತನಿಗೆ ಊಟ ಹಾಕಿದ್ದೇನೆ. ಬೆಂಗಳೂರಿನಲ್ಲಿ ನನ್ನ ಮಗ, ಮಗಳಿದ್ದಾರೆ. ಅವರನ್ನೇ ಕೇಳಿ ಸಂಪೂರ್ಣ ಮಾಹಿತಿ ನೀಡುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಎಸ್ಐಟಿ ಅಧಿಕಾರಿಗಳು ಜಯಂತ್ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮನೆಯ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮನೆಯಲ್ಲಿ ಫೋಟೋ ನೆಗೆಟಿವ್ಸ್ ಪರಿಶೀಲನೆ ನಡೆಸುತ್ತಿದ್ದಾರೆ.