ಮುಂಬಯಿ: ಬಾಲಿವುಡ್ ನ ಹಳೆಯ ಲವ್ ಬರ್ಡ್ಸ್ ಮತ್ತೆ ಒಂದಾಗಿದ್ದನ್ನು ನೋಡಿ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.
ಮಾಜಿ ಪ್ರಿಯಕರ, ನಟ ಶಾಹಿದ್ ಕಪೂರ್ (Shahid Kapoor) ಹಾಗೂ ಮಾಜಿ ಪ್ರೇಯಸಿ ಕರೀನಾ ಕಪೂರ್ (Kareena Kapoor) ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಈ ಮಾಜಿ ಲವ್ ಬರ್ಡ್ಸ್ ಪರಸ್ಪರ ನೋಡಿ ಮುಗುಳು ನಗೆ ಬೀರಿದ್ದಾರೆ. ಹೀಗಾಗಿ ಅಭಿಮಾನಿಗಳು ಸಖತ್ ಖುಷಿ ಪಡುತ್ತಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಶಾಹಿದ್ ಕಪೂರ್, ಕರಣ್ ಜೋಹರ್ ಮತ್ತು ಕರೀನಾ ಕಪೂರ್ ಖಾನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮಾಜಿ ಲವ್ ಬರ್ಡ್ಸ್ ಒಬ್ಬರನೊಬ್ಬರನ್ನು ನೋಡಿ ಸ್ಮೈಲ್ ಕೊಟ್ಟಿದ್ದಾರೆ. ಬ್ರೇಕಪ್ ಆದ ನಂತರ ಇದೇ ಮೊದಲ ಬಾರಿಗೆ ಪ್ರೇಮಿಗಳು ಈ ರೀತಿ ಒಂದಾಗಿದ್ದಾರೆ. ಈ ಆತ್ಮೀಯತೆಯನ್ನು ಕಂಡು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಈ ಮಾಜಿ ಲವ್ ಬರ್ಡ್ಸ್ 2004ರಲ್ಲಿ ಬಾಲಿವುಡ್ ‘ಫಿದಾ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಆದರೆ, 2008ರಲ್ಲಿ ‘ಜಬ್ ವಿ ಮೆಟ್’ ಸಂದರ್ಭದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಶಾಹಿದ್ ಅವರು ಮೀರಾ ಕಪೂರ್ ಅವರನ್ನು ಮದುವೆಯಾದರು. ಕರೀನಾ, ಸೈಫ್ ಅಲಿ ಖಾನ್ ಜೊತೆ ಹೆಜ್ಜೆ ಹಾಕಿದರು.