ಹಾಸನ: ಜನರ ನಿದ್ದೆಗೆಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಸತತ ನಾಲ್ಕು ಗಂಟೆಗಳ ನಂತರ ಕಾರ್ಯಾಚರಣೆ ಯಶಸ್ವಿಯಾಗಿದೆ. ಬೇಲೂರು ತಾಲ್ಲೂಕಿನ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್ ನಲ್ಲಿ ಕಾಡಾನೆ ಸೆರೆ ಸಿಕ್ಕಿದೆ. ಜನರ ನಿದ್ದೆಗೆಡಿಸಿದ್ದ ಪುಂಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸಿದ್ದರು. ಕಾರ್ಯಾಚರಣೆ ನಡೆಸಿ, ವೈದ್ಯರಿಂದ ಅರವಳಿಕೆ ಚುಚ್ಚುಮದ್ದು ನೀಡಿ, ಸೆರೆ ಹಿಡಿಯಲಾಗಿದೆ.
ಅರವಳಿಕೆ ಮದ್ದು ನೀಡಿದ ನಂತರ ಕಾಡಾನೆಗಳ ಜೊತೆ ಒಂಟಿಸಲಗ ಓಡಾಡಿದೆ. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲೆಂದರಲ್ಲಿ ಓಡಾಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಸಾಹಸ ಪಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಕಾಡಾನೆಗಳಿಂದ ಬೇರ್ಪಡಿಸಿ ಸೆರೆ ಹಿಡಿದಿದ್ದಾರೆ. ಒಡಾಡಿದ ನಂತರ ಒಂಟಿ ಸಲಗ ಕುಸಿದು ಬಿದ್ದೆ. ಆನಂತರ ಹಿಡಿಯಲಾಗಿದೆ. ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.