ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಸುತ್ತಮುತ್ತ ಹುಲಿ ದಾಳಿಯ ಭೀತಿ ಮನೆ ಮಾಡಿದ್ದು. ಈ ಹಿನ್ನೆಲೆ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೆಕ್ಯುರಿಟಿ ನೀಡುತ್ತಿದ್ದಾರೆ.
ಉಳುಮೆ ಮಾಡಲು, ಫಸಲು ಕೊಯ್ಲು ಮಾಡಲು, ಜಮೀನುಗಳಲ್ಲಿ ಕೆಲಸ ಮಾಡಲು ರೈತರಿಗೆ ಅರಣ್ಯ ಇಲಾಖೆಯಿಂದ ಸೆಕ್ಯುರಿಟಿ ಕೊಡಲಾಗಿದ್ದು, ಚಾಮರಾಜನಗರ ತಾಲೂಕು ಕಲ್ಪುರ ಸುತ್ತಮುತ್ತ ಭಾರಿ ಗಾತ್ರದ ಹುಲಿ ಕಾಣಿಸಿಕೊಂಡಿತ್ತು. ಈಗಾಗಲೇ ಎರಡು ಹಸುಗಳನ್ನು ಬಲಿ ಪಡೆದಿತ್ತು. ಈ ಹಿನ್ನಲೆ ಜಮೀನುಗಳಿಗೆ ಹೋಗಲು ರೈತರು, ಕೃಷಿ ಕಾರ್ಮಿಕರ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಉಳುಮೆ ಮಾಡಲು, ಬೆಳೆ ಕೊಯ್ಲು ಮಾಡಲು ರೈತರಿಗೆ ಅರಣ್ಯ ಸಿಬ್ಬಂದಿಗಳು ಕಾವಲು ನೀಡುತ್ತಿದ್ದಾರೆ. ಅರಣ್ಯ ಸಿಬ್ಬಂದಿಯ ಕಾವಲಿನಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ.
ಇದನ್ನೂ ಓದಿ:ಬೆಳೆಗಳಿಗೆ ಮಂಗಗಳ ಕಾಟ; ಕೋತಿಗಳನ್ನು ಎದುರಿಸಲು ಚಿಂಪಾಂಜಿಯಾದ ವ್ಯಕ್ತಿ


















