ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿ ಬಂದ ನಂತರ ನಟ ದರ್ಶನ್ ಹೆಚ್ಚಾಗಿ ಸಾರ್ವಜನಿಕ ವಲಯಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಇತ್ತೀಚೆಗೆ ನಟ ದರ್ಶನ್ ಪತ್ನಿಯೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲೊಂದು ಕಾರ್ಯಕ್ರಮದಲ್ಲಿ ಕೂಡ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಹೌದು. ನಟ ನಿರ್ಮಾಪಕ ಬಿ ಸುರೇಶ್ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ದಂಪತಿ ಜೊತೆ ದರ್ಶನ್ ಅವರಿಗೆ ಒಳ್ಳೆಯ ಒಡನಾಟ ಇದೆ. ಶೈಲಜಾ ಹಾಗೂ ಸುರೇಶ್ ಪುತ್ರಿ ಚಂದನ ಎಸ್. ನಾಗ್ ಭರತನಾಟ್ಯ ರಂಗ ಪ್ರವೇಶವನ್ನು ಮಾಡಿದ್ದಾರೆ. ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಅವರು ತಮ್ಮ ಪತ್ನಿ ಜೊತೆ ಆಗಮಿಸಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ ದರ್ಶನ್ ಒಂಟಿಯಾಗಿ ಅಥವಾ ಗ್ಯಾಂಗ್ ಜೊತೆ ಬರುತ್ತಿದ್ದರು. ಫ್ಯಾಮಿಲಿ ಜೊತೆ ಬಂದಿದ್ದು ಕಡಿಮೆ. ಆದರೆ ಇದೀಗ ದರ್ಶನ್ ಅವರು ವಿಜಯಲಕ್ಷ್ಮಿ ಜೊತೆ ಕಾಣಿಸಿಕೊಂಡಿತು ಅಭಿಮಾನಿಗಳಿಗೆ ತುಂಬಾ ಖುಷಿ ಕೊಟ್ಟಿದೆ. ಅಣ್ಣ ಅತ್ತಿಗೆಯ ಮೇಲೆ ಯಾರದು ಕೆಟ್ಟ ದೃಷ್ಟಿ ಬೀಳದಿರಲಿ ಎಂದು ದಚ್ಚು ಅಭಿಮಾನಿಗಳು ಬಯಸುತ್ತಿದ್ದಾರೆ.