ಮುಂಬೈ: ಹಠಾತ್ ಪ್ರವಾಹ ಉಂಟಾದ ಪರಿಣಾಮ ಓರ್ವ ಮಹಿಳೆ ಹಾಗೂ ನಾಲ್ವರು ಅಪ್ರಾಪ್ತರು ಕೊಚ್ಚಿ ಹೋಗಿರುವ ಘಟನೆಯೊಂದು ನಡೆದಿದೆ.
ಲೋನಾವಾಲಾದ (Lonavala) ಭೂಶಿ ಡ್ಯಾಂಗೆ (Bhushi Dam) ಪ್ರವಾಸಕ್ಕೆಂದು ಬಂದಿದ್ದವರೇ ಕೊಚ್ಚಿ ಹೋಗಿದ್ದಾರೆ. ಓರ್ವ ಮಹಿಳೆ ಹಾಗೂ ನಾಲ್ವರು ಅಪ್ರಾಪ್ತರು ಕೊಚ್ಚಿ ಹೋಗಿದ್ದಾರೆ. ಪ್ರವಾಸಕ್ಕೆಂದು ಅವರೆಲ್ಲ ಬಂದಿದ್ದ ಸಂದರ್ಭದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ನೀರಿನ ಹರಿವು ಹಠಾತ್ ಹೆಚ್ಚಾಗಿದ್ದು, 36 ವರ್ಷದ ಓರ್ವ ಮಹಿಳೆ, ಇಬ್ಬರು ಬಾಲಕಿಯರು ಹಾಗೂ ಇಬ್ಬರು ಬಾಲಕರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಟುಕಾಟ ನಡೆಸಿದ್ದು, ಮೂವರ ಶವ ಪತ್ತೆಯಾಗಿದ್ದು, ಇಬ್ಬರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.