ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಐದು ಹಾವುಗಳು ಏಕಕಾಲಕ್ಕೆ ಪ್ರತ್ಯಕ್ಷವಾಗಿ ವಿಸ್ಮಯ ಮೂಡಿಸಿದ ಘಟನೆ ನಡೆದಿದೆ.
ಸರ್ಪಗಳು ದೇವಾಲಯದ ಬಾಗಿಲ ಮೇಲೆ, ದೇವಿಯ ಮೂರ್ತಿಯ ಮೇಲೆ ಆಟವಾಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ವರ್ಷ ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವಾಲಯಕ್ಕೆ ಒಂದು ಹಾವು ಬಂದು ಹೋಗುತಿತ್ತು. ಈ ದೇವಸ್ಥಾನಕ್ಕೂ ಉರಗಗಳಿಗೆ ಏನೋ ನಂಟಿರುವಂತಿದೆ. ಇದು ಗ್ರಾಮಸ್ಥರಲ್ಲಿ ವಿಸ್ಮಯದ ಜೊತೆಗೆ ಭಕ್ತಿಭಾವ ಮುಡಿಸುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.



















