ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಭಾರೀ ಮಳೆಯ ಹಿನ್ನೆಲೆ ಕರ್ನಾಟಕದ ಪಂಚನದಿಗಳು ತುಂಬಿ ಹರಿಯುತ್ತಿವೆ.
ಮಹರಾಷ್ಟ್ರದ ಕೃಷ್ಣ ಅಚ್ಚು ಕಟ್ಟು ಪ್ರದೇಶದ ಜಲಾಶಯಗಳು ಭರ್ತಿಯಾದ ಕಾರಣ ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣ ಮತ್ತು ದೂದಗಂಗಾ ನದಿಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ಒಂದೇ ದಿನಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಕೃಷ್ಣ ಹಾಗೂ ದೂದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಮತ್ತೆ 90 ಸಾವಿರ ಕ್ಯೂಸೆಕ್ ಹೆಚ್ಚು ನೀರು ಏರಿಕೆಯಾಗಿರುವುದರಿಂದ ನದಿ ತೀರದ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ವೇದಾಗಂಗಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ, ದೂದಗಂಗಾ ನದಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 8 ಸೇತುವೆಗಳು ನಾಲ್ಕನೇ ಬಾರಿ ಜಲಾವೃತಗೊಂಡಿವೆ. ಇದರಿಂದ 16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.