ಕೋಲಾರದಲ್ಲಿ ನಿನ್ನೆ ನವ ವಿವಾಹಿತ ಜೋಡಿ ನಡೆಸಿದ ಫಸ್ಟ್ ನೈಟ್ ಫೈಟ್ ಪ್ರಕರಣದಲ್ಲಿ ವಧು ನಿನ್ನೆಯಯೇ ದುರಂತ ಸಾವು ಕಂಡಿದ್ದಳು. ಇತ್ತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವರ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾನೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕು ಚಂಬರಸನಹಳ್ಳಿಯ ಲಿಖಿತಶ್ರೀ ಮತ್ತು ನವೀನ್ ಪ್ರೀತಿಸಿ ಮದುವೆಯಾಗಿದ್ದರು. ಮನಸ್ತಾಪ ಏನಿತ್ತೋ ಗೊತ್ತಿಲ್ಲ ಮಧುಮಂಚವೇರಿದ ಕೆಲವೇ ಗಂಟೆಗಳಲ್ಲಿ ಮಾರಾ-ಮಾರಿ ನಡೆದುಹೋಗಿದೆ. ಮೊದಲ ರಾತ್ರಿ ಶೃಂಗಾರದಲ್ಲಿರಬೇಕಾದ ನವದಂಪತಿಗಳು ಮಾತಿಗೆ ಮಾತು ಬೆಳೆಸಿಕೊಂಡು ತಮ್ಮ ಪಾಲಿನ ಮೊದಲ ರಾತ್ರಿಯನ್ನ ಕರಾಳ ರಾತ್ರಿಯಾಗಿಸಿಕೊಂಡು ಮಚ್ಚುಗಳಲ್ಲಿ ಕೊಚ್ಚಿಕೊಂಡರು. ರಕ್ತದ ಮಡವಲ್ಲಿ ಬಿದ್ದು ಒದ್ದಾಡಿದ ಲಿಖಿತ ಸ್ಥಳದಲ್ಲೇ ಪ್ರಾಣ ಬಿಟ್ಟಳು. ಗಂಭೀರವಾಗಿ ಗಾಯಗೊಂಡು ಬೆಂಗಳೂರ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ನವೀನ ಇಂದು ಕೊನೆ ಉಸಿರೆಳೆದಿದ್ದಾನೆ. ಇದರೊಂದಿಗೆ ಬದುಕು ಬಾಳಬೇಕಾದ ನವಜೋಡಿಗಳು ತಮ್ಮ ಬುದ್ದಿಗೇಡಿತನದಿಂದ ಕಚ್ಚಾಡಿಕೊಂಡು ದುರಂತವಾಗಿ ಬದುಕು ಮುಗಿಸಿಕೊಂಡಿದ್ದಾರೆ.