ಬೆಂಗಳೂರು : ನಟ ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ವೇಣು ಕ್ರಿಯೇಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜ.8ರಂದು ನಟ ಯಶ್ ಹುಟ್ಟುಹಬ್ಬದ ಹಿನ್ನೆಲೆ ಗಾಲ್ಫ್ ಕ್ಲಬ್ ಬಳಿ ಯಶ್ ಮನೆಯ ಎದುರು ಬ್ಯಾನರ್ ಹಾಕಲಾಗಿತ್ತು. ಹುಟ್ಟುಹಬ್ಬ ಶುಭಕೋರಿ ಸಾಕಷ್ಟು ಫ್ಲೆಕ್ಸ್‌ಗಳನ್ನು ಅಭಿಮಾನಿಗಳು ಹಾಕಿದ್ದರು. ಈ ಹಿನ್ನೆಲೆ ಜಿಬಿಎ ಅಧಿಕಾರಿಗಳು ಇದೀಗ ದೂರು ದಾಖಲಿಸಿದ್ದಾರೆ.
ವೇಣು ಕ್ರಿಯೇಶನ್ ವಿರುದ್ದ ದೂರು ದಾಖಲಿಸಲಾಗಿದ್ದು, ನಟ ಯಶ್ ಅವರ ಹೆಸರು ಉಲ್ಲೇಖಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜಿಬಿಎ ವಿಭಾಗದ ಪೂಜಾರಪ್ಪ ಎಂಬುವವರು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ‘ಪರಾಶಕ್ತಿ’ಗೂ ಸಂಕಷ್ಟ | ಚಿತ್ರಕ್ಕೆ ನಿಷೇಧ ಹೇರಲು ತಮಿಳುನಾಡು ಯುವ ಕಾಂಗ್ರೆಸ್ ಆಗ್ರಹ



















