ಬೆಂಗಳೂರು: ದಸರಾ, ದೀಪಾವಳಿ ಹಬ್ಬಗಳು ಸಮೀಪಿಸುತ್ತಿವೆ. ಹಬ್ಬದ ಸಂದರ್ಭದ ವೇಳೆ ಶಾಪಿಂಗ್ ಜೋರಾಗಿರುತ್ತದೆ. ಅದರಲ್ಲೂ, ಐಫೋನ್ ಖರೀದಿಸಬೇಕು ಎಂಬುದು ಹೆಚ್ಚಿನ ಜನರ ಆಸೆಯಾಗಿರುತ್ತದೆ. ಹೀಗೆ, ಐಫೋನ್ ಖರೀದಿಯ ಬಯಕೆ ಹೊಂದಿರುವವರಿಗೆ ಶುಭ ಸಮಾಚಾರ ಸಿಕ್ಕಿದೆ. ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಘೋಷಣೆ ಮಾಡಿದ್ದು, ಆ್ಯಪಲ್ ಐಫೋನ್ 16 ಮೊಬೈಲ್ ಅನ್ನು ಕೇವಲ 52 ಸಾವಿರ ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
ಹೌದು, ಈಗ ಆನ್ ಲೈನ್ ನಲ್ಲಿ ಆ್ಯಪಲ್ ಐಫೋನ್ 16 ಬೆಲೆಯು 80 ಸಾವಿರ ರೂ.ನಿಂದ 94 ಸಾವಿರ ರೂಪಾಯಿವರೆಗೆ ಇದೆ. ಆದರೆ, ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಐಫೋನ್ 16 (128GB) ಬೆಲೆ ಕೇವಲ 51,999ಕ್ಕೆ ಲಭ್ಯವಾಗಲಿದೆ. ಐಫೋನ್ 14 ಬೆಲೆ ಮೊದಲು 69,900 ರೂಪಾಯಿ ಆಗಿತ್ತು, ಪ್ರಸ್ತುತ 59,900 ಇದೆ. ಆದರೆ, ಆಫರ್ ಸೇಲ್ ನಲ್ಲಿ ಇದು 39,999 ರೂಪಾಯಿಗೆ ಲಭ್ಯವಾಗಲಿದೆ.
ಬೇರೆ ಸರಣಿಯ ಐಫೋನ್ ಖರೀದಿಸುವವರಿಗೂ ಉತ್ತಮ ಆಫರ್ ಗಳಿವೆ. ಐಫೋನ್ 16 ಪ್ರೊ ಮ್ಯಾಕ್ಸ್ ದರ ಕೂಡ ಭಾರಿ ಪ್ರಮಾಣದಲ್ಲಿ ಇಳಿದಿದೆ. 256GB ಬೇಸ್ ಐಫೋನ್ 16 ಪ್ರೊ ಮ್ಯಾಕ್ಸ್ ನ ಬಿಡುಗಡೆ ಬೆಲೆ 1,44,900 ರೂ. ಆಗಿತ್ತು, ಆದರೆ ಈಗ ಸೇಲ್ ನಲ್ಲಿ ಕನಿಷ್ಠ 89,999 ರೂ.ನಿಂದ ಖರೀದಿಸಬಹುದು ಎಂದು ಘೋಷಿಸಲಾಗಿದೆ. ಐಫೋನ್ 16 ಪ್ರೊ ಬಿಡುಗಡೆ ಬೆಲೆ 1,19,900 ರೂ. ಆಗಿದ್ದು, ಪ್ರಸ್ತುತ ಫ್ಲಿಪ್ ಕಾರ್ಟ್ ನಲ್ಲಿ ಇದರ ಬೆಲೆ 1,12,900 ರೂ. ಇದೆ. ಆದರೆ, ಬಿಗ್ ಬಿಲಿಯನ್ ಡೇಸ್ ಸೇಲ್ ಬೆಲೆ 69,999 ರೂ. ಆಗಿದೆ.
ಸೆಪ್ಟೆಂಬರ್ 23ರಿಂದ ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭವಾಗಲಿದೆ. ಅಷ್ಟೋತ್ತಿಗಾಗಲೇ ಮೊಬೈಲ್, ವಾಷಿಂಗ್ ಮಷೀನ್, ಟಿವಿ, ಫ್ರಿಡ್ಜ್ ಸೇರಿ ಹಲವು ವಸ್ತುಗಳ ಮೇಲಿನ ಜಿಎಸ್ ಟಿಯೂ ಇಳಿಕೆಯಾಗರಿಲಿದೆ. ಇದರಿಂದಾಗಿ ಗ್ರಾಹಕರು ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ.