ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಸ್ಟೇಡಿಯಂ, ಜೂನ್ 11ರಿಂದ 15ರವರೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025 ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಆರಾಮವಾಗಿ ಫೈನಲ್‌ಗೆ ಬಂದಿದ್ದರೆ, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಈ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ.
ಮೂರನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಹೋಸ್ಟ್ ಮಾಡುತ್ತಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೆ ಭಾರತ ತಂಡದ ಅರ್ಹತೆ ಪಡೆಯದ ಕಾರಣದಿಂದಾಗಿ £4 ಮಿಲಿಯನ್ (ಸುಮಾರು ₹42 ಕೋಟಿ ರೂಪಾಯಿ) ನಷ್ಟ ಉಂಟಾಗಲಿದೆ ಎಂದು ವರದಿಯಾಗಿದೆ.
ಭಾರತದ ನಿರಾಶಾದಾಯಕ ಪ್ರದರ್ಶನ
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಡಬ್ಲ್ಯುಟಿಸಿ ಫೈನಲ್‌ಗೆ ಹ್ಯಾಟ್ರಿಕ್ ಪ್ರವೇಶ ಸಾಧಿಸುವ ನಿರೀಕ್ಷೆ ಹೊಂದಿತ್ತು. ಆದರೆ, ಕಳೆದ 8 ಪಂದ್ಯಗಳಲ್ಲಿ 6 ಸೋಲು ಅನುಭವಿಸಿ ತಂಡ ಫೈನಲ್ ಅವಕಾಶ ಕಳೆದುಕೊಂಡಿತ್ತು., ಭಾರತ ತಂಡ ಹೊಮಿಯಲ್ಲಿಯೇ ನ್ಯೂಜಿಲೆಂಡ್ ವಿರುದ್ಧ 0-3 ಅಘಾತಕರ ಸೋಲು ಅನುಭವಿಸಿದ ಬಳಿಕ, 2024-25ರ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 1-3 ಸೋಲು ಅನುಭವಿಸಿತ್ತು. ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿತ್ತು. .
ಟಿಕೆಟ್ ದರ ಕಡಿತದ ಯೋಚನೆ
ಭಾರತ ಫೈನಲ್‌ಗಾಗಿ ಅರ್ಹತೆ ಪಡೆಯಲಿದೆ ಎಂಬ ನಿರೀಕ್ಷೆಯಲ್ಲಿ, ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಹೈ-ಪ್ರಿಮಿಯಂ ದರದಲ್ಲಿ ಟಿಕೆಟ್ ಬೆಲೆ ನಿಗದಿಪಡಿಸಿತ್ತು. ಆದರೆ ಭಾರತ ಅವಕಾಶ ನಷ್ಟಮಾಡಿಕೊಂಡ ನಂತರ, ಟಿಕೆಟ್‌ಗಳಿಗೆ ನಿರೀಕ್ಷಿತ ಬೇಡಿಕೆ ಬರಲಿಲ್ಲ.
“ಭಾರತೀಯ ಅಭಿಮಾನಿಗಳ ಬೇಡಿಕೆಯು ಭಾರೀ ಮಟ್ಟದಲ್ಲಿರುತ್ತದೆ ಎಂದು ತೀರ್ಮಾನಿಸಿ, ಆಯೋಜಕರು ಟಿಕೆಟ್ ದರವನ್ನು ದೊಡ್ಡ ಮಟ್ಟದಲ್ಲಿ ನಿಗದಿಪಡಿಸಿದ್ದರು. ಆದರೆ, ಭಾರತ ಫೈನಲ್ ಪ್ರವೇಶಿಸದ ಕಾರಣ, ನಷ್ಟದ ಒತ್ತಡಕ್ಕೆ ಸಿಲುಕಿದ್ದು ಟಿಕೆಟ್ ದರಗಳನ್ನು ಕಡಿತಗೊಳಿಸಿದೆ,” ಎಂದು ದಿ ಟೈಮ್ಸ್ ವರದಿ ಮಾಡಿದೆ.
ಆಯೋಜಕರು ಪ್ರಾರಂಭದಲ್ಲಿ ಭಾರಿ ಮೊತ್ತದಲ್ಲಿ ಟಿಕೆಟ್ ಮಾರಾಟ ಮಾಡಲು ಯತ್ನಿಸಿದರೂ, ಲಾರ್ಡ್ಸ್ ಮೈದಾನದಲ್ಲಿ ಖಾಲಿ ಆಸನಗಳ ಮುಂದೆ ಪಂದ್ಯ ನಡೆಸುವಂತಾಗಿದೆ. ಹೀಗಾಗಿ ಟಿಕೆಟ್ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ.
ಈ ಹಿಂದೆ ಖರೀದಿಸಿದವರಿಗೆ ಮರುಪಾವತಿ
ಕಳೆದ ವರ್ಷ, ಎಮ್ಸಿಸಿ ಅತಿಯಾದ ಟಿಕೆಟ್ ದರ ವಿಧಿಸಿರುವ ಬಗ್ಗೆ ತೀವ್ರ ಟೀಕೆಗೆ ಗುರಿಯಾಗಿದೆ. ಈ ಹಿನ್ನಲೆಯಲ್ಲಿ, 2025 ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟಿಕೆಟ್ ದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈಗ ಟಿಕೆಟ್ ಬೆಲೆ £40-£90 (ಸುಮಾರು 4,200 – 9,500 ರೂಪಾಯಿ) ಆಗಿದ್ದು, ಮೊದಲು ನಿಗದಿತ ದರಕ್ಕಿಂತ £50 ಕಡಿಮೆಯಾಗಿದೆ. ಅಲ್ಲದೇ, ಮೊದಲು ಹೈ-ಪ್ರಿಮಿಯಂ ದರದಲ್ಲಿ ಟಿಕೆಟ್ ಖರೀದಿಸಿದ ಎಂಸಿಸಿ ಸದಸ್ಯರಿಗೆ ಬೆಲೆ ಕಡಿತದ ಪರಿಹಾರವಾಗಿ ಮರುಪಾವತಿ ಮಾಡಲಾಗಿದೆ ಎಂದು ‘ದಿ ಟೈಮ್ಸ್’ ವರದಿ ಮಾಡಿದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೂ ಲಾರ್ಡ್ಸ್ ಆತಿಥ್ಯ
ಡಬ್ಲ್ಯುಟಿಸಿ 2025 ಫೈನಲ್ ಬಳಿಕ, ಜುಲೈ 10ರಿಂದ 14ರವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ.