ಕನ್ನಡ ಚಿತ್ರರಂಗವನ್ನು ಅನೇಕ ಕಡೆಗಳಲ್ಲಿ ಕಡೆಗಣಿಸುವ ಕೆಲಸ ಆಗುತ್ತಲೇ ಬರುತ್ತಿದೆ. ಈ ಮೊದಲು ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟರನ್ನು ಕಡೆಗಣಿಸಿದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈಗ ಫಿಲ್ಮ್ಫೇರ್ ಕೂಡ ಅದೇ ತಪ್ಪನ್ನು ಮಾಡಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂಬ ಚರ್ಚೆ ಇದೀಗ ಶುರುವಾಗಿದೆ. ತಪ್ಪನ್ನು ತಿದ್ದುಕೊಂಡು ಅವರು ಕ್ಷಮೆ ಕೇಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಫಿಲ್ಮ್ಫೇರ್ ಅವಾರ್ಡ್ ಆರಂಭ ಆಗಿದ್ದು 1954ರಲ್ಲಿ. ಹಿಂದಿ ಸಿನಿಮಾ ರಂಗದ ಕಲಾವಿದರು ಹಾಗೂ ತಂತ್ರಜ್ಞರನ್ನು ಗೌರವಿಸುವ ಉದ್ದೇಶದಿಂದ ಇದನ್ನು ಮಾಡಲಾಯಿತು. ಆ ಬಳಿಕ 1964ರಲ್ಲಿ ‘ಫಿಲ್ಮ್ಫೇರ್ ಸೌತ್’ ಅವಾರ್ಡ್ ಕಾರ್ಯಕ್ರಮ ಆರಂಭಿಸಲಾಯಿತು. ಈಗ ಫಿಲ್ಮ್ಫೇರ್ ಮ್ಯಾಗಜಿನ್ ಫೋಟೋಶೂಟ್ ಮಾಡಿಸಲಾಗಿದೆ. ಇದರಲ್ಲಿ ಕನ್ನಡ ಚಿತ್ರರಂಗದವರನ್ನು ಕಡೆಗಣಿಸಲಾಗಿದೆ.

ಇತ್ತೀಚಿಗೆ ಕೇರಳದಲ್ಲಿ ನಡೆದ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ‘ಬಘೀರ’ ಚಿತ್ರಕ್ಕಾಗಿ ಶ್ರೀಮುರಳಿಗೆ ಅತ್ಯುತ್ತಮ ನಟ ಪ್ರಶಸ್ತಿ ‘ಕೋಳಿ ಎಸ್ರು’ ಚಿತ್ರಕ್ಕಾಗಿ ಅಕ್ಷತಾಗೆ ಪ್ರಶಸ್ತಿ ಸಂದಿವೆ. ಆದರೆ, ಫಿಲ್ಮ್ಫೇರ್ ಮ್ಯಾಗಜಿನ್ ಮುಖಪುಟದಲ್ಲಿ ಕನ್ನಡ ವಿಜೇತರ ಫೋಟೋ ಹಾಕಿಲ್ಲ ಎಂದು ಶ್ರೀಮುರಳಿ ಅಭಿಮಾನಿಗಳು ಕನ್ನಡ ಕಲಾವಿದರ ಮೇಲೆ ಫಿಲ್ಮ್ಫೇರ್ಗೆ ಉದಾಸೀನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫಿಲ್ಮ್ಫೇರ್ ಮ್ಯಾಗಜಿನ್ ಮುಖಪುಟ ರಿವೀಲ್ ಮಾಡಲಾಗಿದ್ದು, ಇದರಲ್ಲಿ ತಮಿಳಿನಿಂದ ಶಿವಕಾರ್ತಿಕೇಯ, ಅರವಿಂದ್ ಸ್ವಾಮಿ, ಮಲಯಾಳಂನಿಂದ ಮಮ್ಮೂಟ್ಟಿ, ತೆಲುಗಿನಿಂದ ಅಲ್ಲು ಅರ್ಜುನ್ ಇದ್ದಾರೆ. ದಕ್ಷಿಣದ ನಟಿಯರಾದ ಭಾವನಾ, ಕಾಜಲ್ ಅಗರ್ವಾಲ್, ಸಾಯಿ ಪಲ್ಲವಿ ಪೋಸ್ಟರ್ನಲ್ಲಿದ್ದಾರೆ. ಆದರೆ, ಎಲ್ಲಿಯೂ ಕನ್ನಡದ ಕಲಾವಿದರಿಲ್ಲ.
ನಟ ಯಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಿಚ್ಚ ಸುದೀಪ್ ಪರಿಚಯ ಇಡೀ ದೇಶದವರಿಗೆ ಇದೆ. ‘ಕಾಂತಾರ’ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಶಿವರಾಜ್ಕುಮಾರ್ ಅತ್ಯಂತ ಹಿರಿಯ ನಟರು. ರುಕ್ಮಿಣಿ ವಸಂತ್ ಕೂಡ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಇವರ ಪೈಕಿ ಯಾರಾದರೂ ಒಬ್ಬರಾದರೂ ಮ್ಯಾಗಜಿನ್ ಶೂಟ್ನಲ್ಲಿ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ಲಾಕ್‌ಡೌನ್ ಆಗಲ್ಲ, ವದಂತಿಗಳನ್ನು ನಂಬದಿರಿ – ನಾಗರಿಕರಿಗೆ ಕೇಂದ್ರ ಸರ್ಕಾರ ಅಭಯ!



















