ಕಲಬುರಗಿ: ದೇವಸ್ಥಾನದ ದುಡ್ಡಿಗಾಗಿ ಎರಡು ಕುಟುಂಬಗಳು ನಡು ರಸ್ತೆಯಲ್ಲಿ ಹೊಡೆದಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅವರಾದ ಗ್ರಾಮದಲ್ಲಿ ನಡೆದಿದೆ. ಶಿವಲಿಂಗಪ್ಪ ಪೂಜಾರಿ ಮತ್ತು ಮಾಳಪ್ಪ ಶಿವಗೊಂಡ ಕುಟುಂಬದ ನಡುವೆ ಹೊಡೆದಾಟ ನಡೆದಿದ್ದು, ಹೊಡೆದಾಟ ಮಾಡಿಕೊಂಡ ವಿಡಿಯೋ ಮೊಬೈಲ್ ನಲ್ಲಿ ಸರೆಯಾಗಿದೆ.
ಬೀರಲಿಂಗೇಶ್ವರ ದೇವಸ್ಥಾನದ ಪೂಜೆ ಪ್ರತಿ ವರ್ಷ ಒಂದೊಂದು ಕುಟುಂಬ ಮಾಡುತ್ತಿದೆ. ಈ ಬಾರಿ ದೇವಸ್ಥಾನದ ದುಡ್ಡು ಜಂಟಿ ಖಾತೆ ತೆರೆದು ಬ್ಯಾಂಕ್ ನಲ್ಲಿ ಇಡುವುದಾಗಿ ಒಂದು ಕುಟುಂಬ ಹೇಳಿದೆ. ದೇವಸ್ಥಾನದ ಪೂಜೆ ಯಾರು ಮಾಡುತ್ತಾರೆ ಅವರ ಬಳಿ ಹಣ ಇರಲಿ ಎಂದು ಮತ್ತೊಂದು ಕುಟುಂಬ ಹೇಳಿತ್ತು. ಈ ಸಲುವಾಗಿ ಎರಡು ಗುಂಪು ಹೊಡೆದಾಟ ಮಾಡಿಕೊಂಡಿದೆ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ ಹಿನ್ನಲೆ ಜೇವರ್ಗಿ ಠಾಣೆಯ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಎರಡು ಕುಟುಂಬಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.