ಪೊಲೀಸರಿಂದ ಪೊಲೀಸರ ಮೇಲೆಯೇ ಗೂಂಡಾಗಿರಿ ನಡೆದಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ರಾಜ್ಯದ ಗಡಿಭಾಗ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಸಬ್ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಮತ್ತು ಹನುಮಗೌಡ ಪಾಟೀಲ್, ಕಾನ್ಸ್‌ಟೇಬಲ್ ಗಳಾದ ಅರ್ಜುನ್ ಕಾಂಬ್ಳೇ, ಸುರೇಶ್ ಸೇರಿದಂತೆ ಮೂವರು ಮತ್ತೊಂದು ಪೊಲೀಸ್ ತಂಡದ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರಕರಣವೊಂದರ ಪತ್ತೆಗಾಗಿ ಗುರುಪ್ರಸಾದ್ ಅಂಡ್ ಗ್ಯಾಂಗ್ ಇನ್ನೋವಾ ಮತ್ತು ಶಿಫ್ಟ್ ಕಾರಿನಲ್ಲಿ ಆಗಮಿಸಿ ಅತ್ತಿಬೆಲೆ ಟೋಲ್ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ಬೈಕ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಅಪ್ರೋಜ್ ಖಾನ್ ಮಗ ಬೇಕರಿಗೆ ಬಂದಿದ್ದಾನೆ ಆಗ ಅಪ್ರೋಜ್ ಖಾನ್ ಮಗನ ಬೈಕ್ ಅಡ್ಡಗಟ್ಟಿ ಗುರುಪ್ರಸಾದ್ ಹಾಗೂ ಟೀಂ ದಾಖಲೆ ಕೇಳಿದ್ದಾರೆ. ನಮ್ಮ ತಂದೆ ಪೊಲೀಸ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ನಾವು ನಿಜವಾದ ಪೊಲೀಸರು, ಕರೆಯೋ ನಿಮ್ಮಪ್ಪನ ಎಂದು ಮತ್ತೆ ಹಲ್ಲೆ ಮಾಡಿದ್ದಾರೆ. ಮಗ ತಂದೆಗೆ ಫೋನ್ ಮಾಡುತ್ತಿದ್ದಂತೆ ಅಪ್ರೋಜ್ ಖಾನ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ನನ್ನ ಮಗನಿಗೆ ಯಾಕೇ ಹೊಡೆಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ನೀನು ಯಾವ ಪೊಲೀಸ್ ಎಂದು ಮೊಬೈಲ್ ಕಿತ್ತುಕೊಂಡು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ, ಹೆಡ್ ಕಾನ್ಸ್ಟೇಬಲ್ ಅಪ್ರೋಜ್ ಖಾನ್ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕಾರಿಗೆ ಎಳೆದುಕೊಂಡು ಕಿಡ್ನಾಪ್ ಮಾಡಲು ಯತ್ನ ಆರೋಪ
ಇದೇ ವೇಳೆ ಹೆಡ್ ಕಾನ್ಸ್ಟೇಬಲ್ ಅಪ್ರೋಜ್ ಖಾನ್‌ನನ್ನು ಕಾರಿಗೆ ಎಳೆದುಕೊಂಡು ಕಿಡ್ನಾಪ್ ಮಾಡಲು ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಗೆ ಅಪ್ರೋಜ್ ಖಾನ್ ದೂರು ನೀಡಲು ಮುಂದಾಗಿದ್ದಾರೆ. ಆದರೆ, ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎನ್ನಲಿದೆ. ಪೋಲಿಸರ ಗುಂಡಾ ವರ್ತನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.