ಬೆಂಗಳೂರು: ಕೊರೊನಾ ಆತಂಕದ ನಂತರ ಈಗ ರಾಜ್ಯಕ್ಕೆ ಮತ್ತೆ ಹೊಸ ವೈರಸ್ ನ ಭಯ ಶುರುವಾಗಿದೆ.
ರಾಜ್ಯದಲ್ಲಿ MPOX ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಆತಂಕ ಮನೆ ಮಾಡುತ್ತಿದೆ.
40 ವರ್ಷದ ವ್ಯಕ್ತಿಗೆ MPOX ವೈರಸ್ ಪಾಸಿಟಿವ್ ಬಂದಿದೆ. NIV ಲ್ಯಾಬ್ ನಲ್ಲಿ MPOX ವೈರಸ್ ಪಾಸಿಟಿವ್ ಆಗಿದೆ.
40 ವರ್ಷದ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಈ ವ್ಯಕ್ತಿ ದುಬೈ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ WHO, MPOX ವೈರಸ್ ಅನ್ನು ಪಬ್ಲಿಕ್ ಹೆಲ್ತ್ ಎರ್ಮಜೆನ್ಸಿ ಆಫ್ ಇಂಟರ್ನ್ಯಾಷನಲ್ ಎಂದು ಘೋಷಿಸಿದೆ. ಸೋಂಕಿತ ವ್ಯಕ್ತಿ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ ಈ ವರ್ಷದ ಮೊದಲ MPOX ವೈರಸ್ ಪತ್ತೆಯಾಗಿದೆ. ಈ ಹಿಂದೆ 2024ರ ಸಪ್ಟೆಂಬರ್ ತಿಂಗಳಲ್ಲಿ ಮೊದಲ MPOX ವೈರಸ್ ಪತ್ತೆಯಾಗಿತ್ತು.